ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 12 : ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ತಳ ಮಟ್ಟದಿಂದ ಬಲಪಡಿಸುವ ಮತ್ತು ಸಂಘಟನಾತ್ಮಕವಾಗಿ ಚಟುವಟಿಕೆಗಳನ್ನು ಅತಂತ್ಯ ಪರಿಣಾಮಕಾರಿಯಾಗಿ ಮುನ್ನೆಡೆಸುವ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಪಕ್ಷದ ಎಸ್.ಟಿ. ಮೋರ್ಚಾವನ್ನು ಬಲಪಡಿಸಲಾಗಿದೆ ಇದರಿಂದ ನೂತನವಾಗಿ ಎಸ್.ಟಿ.ಮೋರ್ಚಾಕ್ಕೆ 5 ಜನ ಉಪಾಧ್ಯಕ್ಷರು, ಇಬ್ಬರು ಪ್ರಧಾನ ಕಾರ್ಯದರ್ಶಿಗಳು, 7 ಜನ ಕಾರ್ಯದರ್ಶಿಗಳು ಹಾಗೂ 12 ಜನ ಕಾರ್ಯಕಾರಿಣಿ ಸದಸ್ಯರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷರಾದ ಜೆ.ಬಿ.ರಾಜು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಹೊಳಲ್ಕರೆಯ ಗೌರಿ ರಾಜಕುಮಾರ್, ಚಳ್ಳಕೆರೆಯ ಟಿ.ಜೆ.ತಿಪ್ಪೇಸ್ವಾಮಿ, ಹಿರಿಯೂರಿನ ಎಸ್.ಲೋಕೇಶ್, ಮೊಳಕಾಲ್ಮೂರಿನ ಕೆ.ಬಿ.ಮಹೇಶ್, ಭರಮಸಾಗರದ ನರಸಿಂಹಮೂರ್ತಿ ಎ. ಹಾಗೂ ಚಿತ್ರದುರ್ಗ ಗ್ರಾಮಾಂತರದ ಟಿ.ಎಸ್.ವಸಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿರ್ಯಾಗಿ ನಾಯಕನಹಟ್ಟಿಯ ಬಿ.ಓ.ಬೋಸೆರಂಗಪ್ಪ, ಚಳ್ಳಕೆರೆಯ ನವೀನ್ ಎನ್ ನೇಮಕವಾದರೆ, ಕಾರ್ಯದರ್ಶಿಗಳಾಗಿ ಹಿರಿಯೂರಿನ ದಕ್ಷಿಣ ಮೂರ್ತಿ ಎಸ್, ಪರಶುರಾಮಪುರದ ನಾಗರಾಜ್ ಬಿ.ನಾಯಕ್, ಹೊಳಲ್ಕೆರೆಯ ಅಜೆಯ್ ಜೆ.ಆರ್, ಹೊಸದುರ್ಗದ ವಿಜಯಕುಮಾರ್ ಆರ್. ಚಿತ್ರದುರ್ಗ ಗ್ರಾಮಾಂತರದ ಪಿ.ಜಯ್ಯಣ್ಣ ಹಾಗು ಹೊಳಲ್ಕೆರೆಯ ಮಲೇಶ್ ನಾಯಕ ನೇಮಕವಾದರೆ ಕಾರ್ಯಕಾರಿಣಿ ಸದಸ್ಯರಾಗಿ ಭರಮಸಾಗರದ ತಿಪ್ಪೇಸ್ವಾಮಿ, ಕಣ್ಣಮಪ್ಪ ಎಸ್, ಹೊಳಲ್ಕೆರೆಯ ತಿಪ್ಪೇಸ್ವಾಮಿ, ಚಳ್ಳಕೆರೆಯ ಎಂ.ಓ.ತಿಪ್ಪೇಸ್ವಾಮಿ, ರಾಜಶೇಖರ್, ಹೊಸದುರ್ಗದ ಹರೀಶ್ ಕೆ. ಚಿತ್ರದುರ್ಗ ಗ್ರಾಮಾಂತರದ ರಮೇಶ್ ಟಿ.ಎಂ. ಮಂಜುನಾಥ್ ಓ, ಹಿರಿಯೂರಿನ ಮರಡಿ ವಿಶ್ವನಾಥ್, ಹೇಮದಳ ದೇವರಾಜ್ ಮೊಳಕಾಲ್ಮೂರಿನ ಭೀಮಣ್ಣ ರವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಜೆ.ಬಿ.ರಾಜು ಅದೇಶವನ್ನು ಹೊರಡಿಸಿದ್ದಾರೆ.












