ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಿಂದ ಇಡೀ ರಾಜ್ಯ ದುಃಖದಲ್ಲಿದೆ. ರಾಜ್ಯ ಸರ್ಕಾರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದೆ. ಅತ್ತ ಸರ್ಕಾರವೇಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಇದರಿಂದಾನೇ ಸಮಸ್ಯೆ ಆಗಿರೋದು ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಸಚಿವ ಪ್ರಿಯಾಂಕ್ ಖರ್ಗೆ, ಇದು ಸರ್ಕಾರದ ವೈಫಲ್ಯವೆಂದು ಒಪ್ಪಿಕೊಂಡಿದ್ದಾರೆ. ಪೂರ್ವ ಸಿದ್ಧತೆ ಇಲ್ಲದೆ ಸರ್ಕಾರ ಯಡವಟ್ಟು ಮಾಡಿಕೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿರುವ ವಿಡಿಯೋವೊಂದನ್ನ ಜೆಡಿಎಸ್ ಹಂಚಿಕೊಂಡಿದೆ.
ಬೆಂಗಳೂರಿನಲ್ಲಿ ಇಂಥಹದೊಂದು ಕಾಲ್ತುಳಿತ ದುರ್ಘಟನೆ ನಡೆಯಬಾರದಿತ್ತು. 18 ವರ್ಷದಿಂದ ಆರ್ಸಿಬಿ ಅಭಿಮಾನಿಗಳು ಈ ಸಂಭ್ರಮಕ್ಕೆ ಕಾಯುತ್ತಿದ್ದರು. 35 ಸಾವಿರ ಜನ ಸೇರಬಹುದೆಂದು ನಾವೂ ಅಂದಾಜಿಸಿದ್ದೆವು. ಆದರೆ 2.5 ಲಕ್ಷದಿಂದ 3 ಲಕ್ಷದವರೆಗೆ ಜನರು ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್ ಅವರು ಇದರ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಟ್ವೀಟ್ ಮಾಡಿರುವ ಜೆಡುಎಸ್ ವಿಪಕ್ಷಗಳ ಅನುಮಾನವನ್ನು ಬಹಿರಂಗವಾಗಿ ಒಪ್ಪಿಕೊಂಡಂತೆಯೇ ಸರಿ ಎಂದಿದ್ದಾರೆ. ಸರ್ಕಾರದ ಬೇಜವಾಬ್ದಾರಿಯಿಂದಾನೇ ಈ ರೀತಿ ಆಗಿದ್ದು ಎಂದು ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರು ಮುಗಿಬಿದ್ದಿದ್ದಾರೆ. ಅತ್ತ ಸಾವನ್ನಪ್ಪಿದ ಕುಟುಂಬಸ್ಥರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆಯಾಗಿದೆ. ಕಣ್ಣೀರಿನ ಸಾಗರದಲ್ಲಿ ಕೈತೊಳೆಯುತ್ತಾ ಕೂತಿದ್ದಾರೆ. ಮಕ್ಕಳನ್ನ ಕಳೆದ ಪೋಷಕರು ದಿಕ್ಕೆ ಕಾಣದಂತೆ ಕೂತಿದ್ದಾರೆ. ಮನೆಗೆ ಆಧಾರವಾಗಬೇಕಿದ್ದ, ಉತ್ತಮ ಭವಿಷ್ಯದ ಕನಸು ಕಂಡಿದ್ದು ಅತಿ ಚಿಕ್ಕವಯಸ್ಸಿನ ಮಕ್ಕಳೇ ಇಂದು ಅಸುನೀಗಿದ್ದಾರೆ.
















