ಜೀವನದಲ್ಲಿ ಕೆಲವೊಂದು ವಿಷಯಗಳನ್ನು ಆಪ್ತರು ಹಾಗೂ ಕುಟುಂಬದ ಸದಸ್ಯರೊಂದಿಗೂ ಹಂಚಿಕೊಳ್ಳದೆ ಗೌಪ್ಯವಾಗಿ ಇಟ್ಟುಕೊಳ್ಳುವುದು ಉತ್ತಮ ಎಂಬ ಮಾತಿದೆ. ಚಾಣಕ್ಯ ನೀತಿಯಲ್ಲಿಯೂ ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳದಂತೆ ಸಲಹೆ ನೀಡಲಾಗಿದೆ. ವಿಶೇಷವಾಗಿ ಈ ಐದು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ.
ಹಣಕಾಸಿನ ವಿವರಗಳು

ನಿಮ್ಮ ಉಳಿತಾಯ, ಆದಾಯ, ಹಣದ ವಿಚಾರಗಳು ಹಾಗೂ ಸಾಲದ ವಿವರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬಾರದು. ಇಂತಹ ವೈಯಕ್ತಿಕ ಹಣಕಾಸಿನ ಮಾಹಿತಿಯನ್ನು ಅಗತ್ಯವಿದ್ದವರಿಗೆ ಮಾತ್ರ ತಿಳಿಸುವುದು ಉತ್ತಮ.
ದಂಪತಿಗಳ ನಡುವಿನ ಜಗಳ
ಪತಿ-ಪತ್ನಿಯ ನಡುವೆ ನಡೆಯುವ ವೈಯಕ್ತಿಕ ವಿಚಾರಗಳು ಮತ್ತು ಜಗಳಗಳನ್ನು ಮೂರನೇ ವ್ಯಕ್ತಿಯೊಂದಿಗೆ ಚರ್ಚಿಸಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ದಾಂಪತ್ಯದ ಸಮಸ್ಯೆಗಳನ್ನು ಬಹಿರಂಗಪಡಿಸುವುದರಿಂದ ಸಂಬಂಧದಲ್ಲಿ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಭವಿಷ್ಯದ ಯೋಜನೆಗಳು
ನೀವು ಕೈಗೊಳ್ಳಲು ಉದ್ದೇಶಿಸಿರುವ ಪ್ರಮುಖ ಯೋಜನೆಗಳು ಹಾಗೂ ನಿರ್ಧಾರಗಳನ್ನು ಎಲ್ಲರಿಗೂ ಮುಂಚಿತವಾಗಿ ಹೇಳಿಕೊಳ್ಳುವುದು ಸೂಕ್ತವಲ್ಲ. ಕೆಲಸ ಪೂರ್ಣಗೊಂಡ ಬಳಿಕ ಅದರ ಫಲಿತಾಂಶವನ್ನು ಹಂಚಿಕೊಳ್ಳುವುದು ಉತ್ತಮ ಎಂಬುದು ಈ ನೀತಿಯಲ್ಲಿನ ಸಲಹೆಯಾಗಿದೆ.
ಬೇರೆಯವರು ಹೇಳಿದ ರಹಸ್ಯಗಳು
ಯಾರಾದರೂ ನಿಮ್ಮ ಮೇಲೆ ನಂಬಿಕೆ ಇಟ್ಟು ವೈಯಕ್ತಿಕ ವಿಷಯವೊಂದನ್ನು ಹಂಚಿಕೊಂಡಿದ್ದರೆ ಅದನ್ನು ಮತ್ತೊಬ್ಬರಿಗೆ ಹೇಳಬಾರದು. ಇತರರ ರಹಸ್ಯವನ್ನು ಬಹಿರಂಗಪಡಿಸುವುದರಿಂದ ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕುಟುಂಬದ ವೈಯಕ್ತಿಕ ವಿಚಾರಗಳು
ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳನ್ನು ಅವರ ಅನುಮತಿ ಇಲ್ಲದೆ ಹೊರಗಿನವರಿಗೆ ತಿಳಿಸಬಾರದು. ಕುಟುಂಬದ ಗೌರವ ಮತ್ತು ವೈಯಕ್ತಿಕ ಗೌಪ್ಯತೆಯನ್ನು ಕಾಪಾಡುವುದು ಮುಖ್ಯ ಎಂದು ಚಾಣಕ್ಯ ನೀತಿ ಸೂಚಿಸುತ್ತದೆ.












