Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆ | ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Facebook
Twitter
Telegram
WhatsApp

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.30 :  ತಾಲ್ಲೂಕಿನ ತಳುಕು ಹೋಬಳಿಯ ಶ್ರೀ ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ವಸ್ತುಪ್ರದರ್ಶನದ ಮಾದರಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಬೆಂಗಳೂರಿನ ಟಾಟಾ ಪವರ್ ಸೋರ್ಸ್ ಕಂಪನಿಯು ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಉರ್ಜಾ ಮೇಳ, ವಿಜ್ಞಾನ ವಸ್ತುಪ್ರದರ್ಶನ ಹಾಗೂ ಬಿತ್ತಿ ಚಿತ್ರಗಳ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ದೇವರೆಡ್ಡಿ ಹಳ್ಳಿ ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರೀತಂ ಹಾಗೂ ಪ್ರಿಯಾಂಕ ತಯಾರಿಸಿದ ಸೌರಶಕ್ತಿಯನ್ನು ಬಳಸಿಕೊಂಡು ಯು ಪಿನ್ ಕರ್ವ್ ಗಳಲ್ಲಿ ವಾಹನಗಳ ರಸ್ತೆ ಸುರಕ್ಷತೆಯ  ಎಚ್ಚರಿಕೆ ಎಂಬ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ದೆಹಲಿಯಲ್ಲಿ ನಡೆಯುವ  ರಾಷ್ಟ್ರೀಯ ಟಾಟಾ ಸೋಲಾರ್ ಉರ್ಜಾ ಮೇಳದಲ್ಲಿ  ಈ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿಜ್ಞಾನ ಶಿಕ್ಷಕಿ ಶ್ರೀಮತಿ ಮಮತಾ ದೇವಿ ಬಿ. ಎ ಇವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅಗಸ್ತ್ಯ ಪೌಂಡೇಶನ್ ಶಿಕ್ಷಕರಾದ ಬಸವೇಶ್ವರ ಕೂಡ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್. ಸುರೇಶ್, ಮುಖ್ಯ ಶಿಕ್ಷಕರಾದ ನಾಗರಾಜ್, ವಿದ್ಯಾರ್ಥಿಗಳ ಪೋಷಕರು, ಹಾಗೂ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮದಕರಿಪುರದಲ್ಲಿ ಕೊಲ್ಲಾಪುರದಮ್ಮ ಜಾತ್ರೆ | ಕೋಣ ಗುದ್ದಿ ಓರ್ವ ಮೃತ

  ಸುದ್ದಿಒನ್, ಚಿತ್ರದುರ್ಗ, ಮೇ. 01 : ಜಾತ್ರೆಯಲ್ಲಿ ದೇವಿಗೆ ಕೋಣ ಬಲಿ ಕೊಡುವ ವೇಳೆ ಕೊಣ ಗುದ್ದಿ ಕೊಲ್ಲಪ್ಪ (53 ವರ್ಷ) ಎಂಬಾತ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮದಕರಿ ಪುರ ಗ್ರಾಮದಲ್ಲಿ ಇಂದು

ರಾಹುಲ್ ಚೌದ್ರಿ ನಿಧನ

  ಹಿರಿಯೂರು, ಸುದ್ದಿಒನ್, ಮೇ. 01 : ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ರಾಹುಲ್ ಚೌದ್ರಿ (34) ಅವರು ಅನಾರೋಗ್ಯದಿಂದ ಇಂದು(ಬುಧವಾರ) ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು

ಹೆಚ್ಚು ನೀರು ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ : ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿಯೇ ವೈದ್ಯರು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲು ಹೇಳುತ್ತಾರೆ. ಹೆಚ್ಚು ನೀರು ಇರುವ ಹಣ್ಣುಗಳು ಮತ್ತು ಆಹಾರಗಳನ್ನು

error: Content is protected !!