ವರದಿ ಮತ್ತು ಫೋಟೋ ಕೃಪೆ :
ಕೋಡಿಹಳ್ಳಿ ಟಿ.ಶಿವಮೂರ್ತಿ
ಚಳ್ಳಕೆರೆ, ಮೊ : 97427 56304
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 21 : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘದ ಸಹಯೋಗದೊಂದಿಗೆ 23ನೇ ವರ್ಷದ ಆದಿಯೋಗಿ ಶಿವಶಕ್ತಿ ಮಂಟಪದಲ್ಲಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಬಾರಿ ಗ್ರಾಮದ ಶಕ್ತಿ ದೇವತೆಯಾದ ಶ್ರೀ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಹಾಗೂ ಶಿವನ ನಾಗಸ್ವರೂಪಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ ಯುವಕ-ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ನಿತ್ಯವೂ ವಿವಿಧ ಕುಟುಂಬಗಳ ವತಿಯಿಂದ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆದವು.

ಉತ್ಸವದ ಕೊನೆಯ ದಿನದಂದು ಇಡೀ ಸಮುದಾಯದ ಜನತೆಗೆ ಹಾಗೂ ಆಗಮಿಸಿದ್ದ ಭಕ್ತಾದಿಗಳಿಗೆ ಬೃಹತ್ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುಮಾರು 10 ಅಡಿ ಎತ್ತರದ ಏಳುಹೆಡೆ ಸರ್ಪದ ಮೇಲೆ ಆಸೀನನಾಗಿದ್ದ ಶಿವಸ್ವರೂಪಿ ಶ್ರೀ ಗಣೇಶ ಮೂರ್ತಿಗೆ ವಿಶೇಷ ಮಹಾಮಂಗಳಾರತಿ ನೆರವೇರಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಡಿ.ಜೆ ಸದ್ದಿಗೆ ನೂರಾರು ಯುವಕ-ಯುವತಿಯರು ಮತ್ತು ಹಿರಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಗಣಪತಿಗೆ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ವಿಘ್ನವಿನಾಶಕನ ಕೃಪೆಗೆ ಪಾತ್ರರಾದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿಯುತವಾಗಿ, ಶಾಸ್ತ್ರೋಕ್ತ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ಈ ಗೌರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಮಲ್ಲಯ್ಯ, ,ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಏಚ್, , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು,ವಿಜಯ್ ಕುಮಾರ್.ಎಸ್ ಮೋಹನ್ .ಡಿ ನಂದೀಶ್. ಓ ಶ್ರೀಧರ್.ಏಚ್ ,ನಿಂಗರಾಜು.ಟಿ, ರಾಜು.ಡಿ ರಮೇಶ್.ಎಂ, ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ಮಾರಣ್ಣ, ಶಿವಪ್ಪ, ಭವೇಶ್, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ,ಗಣೇಶ್, ಹಾಗೂ ಎಲ್ಲ ಗ್ರಾಮಸ್ಥರು ಭಾಗವಹಿಸಿದ್ದರು,ಮತ್ತು ಸಮುದಾಯದ ಎಲ್ಲ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಈ ಬಾರಿಯ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.











