Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | 6 ಲಕ್ಷ ಮೌಲ್ಯದ ಗಾಂಜಾ ವಶ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ನವೆಂಬರ್. 06 : ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಚಳ್ಳಕೆರೆ ಅಬಕಾರಿ ನಿರೀಕ್ಷಕ ಸಿ. ನಾಗರಾಜು ಹಾಗೂ ಚಿತ್ರದುರ್ಗ ಅಬಕಾರಿ ನಿರೀಕ್ಷಕಿ ಎ. ವನಿತಾ ಹಾಗೂ ಅಬಕಾರಿ ಸಿಬ್ಬಂದಿಗಳಿಂದ ದಾಳಿ ಮಾಡಲಾಗಿದ್ದು ಒಟ್ಟು 6.ಲಕ್ಷ 80 ಸಾವಿರ ಮೌಲ್ಯದ 13 ಕೆ.ಜಿ 680 ಗ್ರಾ ಗಾಂಜಾ ವಶಕ್ಕೆ ಪಡೆದಿದ್ದಾರೆ.

ನಗರದ ಸೂಜಿಮಲ್ಲೇಶ್ವರ ನಗರದ ಮನೆ ಮೇಲೆ ಅಬಕಾರಿ ಡಿಸಿ ಡಾ..ಬಿ.ಮಾದೇಶ ಇವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ತಳಕಿನ ಮೆಹಬೂಬ್ ಎನ್ನುವ ವ್ಯಕ್ತಿ ಮನೆಯ ಬಾಡಿಗೆ ಪಡೆದು ಗಾಂಜಾ ಶೇಖರಣೆ ಮಾಡಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಇಂದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಚಳ್ಳಕೆರೆ ಹಿರಿಯ ನ್ಯಾಯಾಧೀಶರ ಅನುಮತಿ ‌ಮೇರೆಗೆ ಮನೆ ಬೀಗ ಹೊಡೆದು ಶೋಧ ಮಾಡಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ ವ್ಯಕ್ತಿಯ ಶೋಧಕಾರ್ಯ ನಡೆದಿದೆ.

ನಗರ ಸಭೆ ಅಧಿಕಾರಿಗಳಾದ ಲಿಂಗರಾಜು ವಿಶ್ವನಾಥ್ ಇವರ ಸಮಕ್ಷಮದಲ್ಲಿ ದಾಳಿ ಮಾಡಲಾಗಿದೆ. ದಾಳಿಯ ವೇಳೆ ಅಬಕಾರಿ ಪಿಎಸ್ ಐ ವಿ.ವೀರಣ್ಣ, ಮುಖ್ಯಪೇದೆ ರಮೇಶ್ ನಾಯ್ಕ್, ಬಸವರಾಜ್,ಅಬಕಾರಿ ಪೇದೆಗಳಾದ ನಾಗರಾಜು ಸೋಮಶೇಖರ್ ನಾಗರಾಜ್ ತೋಳಮಟ್ಟಿ, ಅಬಕಾರಿ ಸಿಬ್ಬಂದಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...