ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಚಳ್ಳಕೆರೆ, ಆಗಸ್ಟ್.16 : ಕುರಿ ಹಟ್ಟಿಗೆ ನುಗ್ಗಿದ ಬೀದಿ ನಾಯಿಗಳು ಕುರಿ ಹಾಗು ಮರಿಗಳ ಮೇಲೆ ದಾಳಿ ಮಾಡಿದ್ದು 5 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಹಾಲಗೊಂಡನಹಳ್ಳಿ ಗ್ರಾಮದ ಕುರಿಗಾಯಿ ತಿಪ್ಪೇಸ್ವಾಮಿಗೆ ಸೇರಿದ ಕುರಿಗಳು ರಾತ್ರಿ ಕುರಿಹಟ್ಟಿಯಲ್ಲಿ ಮಲಗಿದ್ದ ವೇಳೆ, ಏಕಾಏಕಿ ಬೀದಿನಾಯಿಗಳು ದಾಳಿ ನಡೆಸಿದೆ.
ರೈತ ತಿಪ್ಪೇಸ್ವಾಮಿ ಕುಟುಂಬ ನಿರ್ವಹಣೆಗಾಗಿ ಮಾರುಕಟ್ಟೆಯಿಂದ 5 ಸಾವಿರ ರೂ. ನಂತೆ 10 ಕುರಿ ಮರಿಗಳನ್ನು ಖರೀದಿಸಿ ತಂದು ಮನೆಯ ಪಕ್ಕದಲ್ಲೇ ಒಂದು ಚಿಕ್ಕ ಗುಡಿಸಲು ನಿರ್ಮಿಸಿ, ಸುತ್ತಲೂ ಬಲೆಯನ್ನು ಹಾಕಿ ಕುರಿಗಳನ್ನು ಸಾಕುತ್ತಿದ್ದ. ಗುರುವಾರ ರಾತ್ರಿ ಏಕಾಏಕಿ ಕುರಿಗಳ ಮೇಲೆ ಬೀದಿ ದಾಳಿ ಮಾಡಿ 5 ಕುರಿ ಮರಿಗಳನ್ನು ಕೊಂದು ಹಾಕಿದ್ದು, ಉಳಿದ 5 ಮರಿಗಳಿಗೆ ಗಂಭೀರ ಗಾಯಗಳಾಗಿವೆ.
ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕುರಿ ಸಾಕಾಣಿಕೆದಾರರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದಾಳಿಗೆ ತುತ್ತಾದ ಕುರಿಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗ್ರಾಮಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







