Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಚಳ್ಳಕೆರೆ | ಕೋಳಿ ಪಂದ್ಯ ಜೂಜಾಟ ; 15 ಮಂದಿ ಬಂಧನ…!

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 23 : ತಾಲ್ಲೂಕಿನ ಮಿರಾಸಾಬಿಹಳ್ಳಿ ಗ್ರಾಮದ ಸಮೀಪ ರಾಣಿಕೆರೆ ಚಾನಲ್ ಪಕ್ಕದ ರಸ್ತೆಯಲ್ಲಿ ಹಣವನ್ನ ಪಣಕ್ಕಿಟ್ಟು ಕೋಳಿ ಅಂಕ ಪಂದ್ಯ ಜೂಜಾಟದಲ್ಲಿ ತೊಡಗಿದ್ದ 15 ಮಂದಿಯನ್ನು ಚಳ್ಳಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಳ್ಳಕೆರೆ ಡಿವೈಎಸ್ಪಿ ಎಂ.ಜೆ ಸತ್ಯನಾರಾಯಣ ರಾವ್ ಇವರ ಸೂಚನೆ ಮೇರೆಗೆ ಚಳ್ಳಕೆರೆ ಪೊಲೀಸ್ ಇನ್ಸ್‌ಪೆಕರ್ ಕೆ.ಕುಮಾರ್ ಇವರ ನೇತೃತ್ವದಲ್ಲಿ ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ಕೋಳಿ ಜೂಜಾಟಕ್ಕೆ ಬಳಸಿಕೊಂಡಿದ್ದ 11,710 ರೂಪಾಯಿ ಹಣವನ್ನು ವಶಕ್ಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Join WhatsApp

Join Now

Join Telegram

Join Now