Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

35-40 ವರ್ಷದಿಂದ ನಮಗೆ ಅನ್ಯಾಯವಾಗಿದೆ : ಒಳಮೀಸಲಾತಿ ಬಗ್ಗೆ ಆಂಜನೇಯ ಬೇಸರ

---Advertisement---

ಸುದ್ದಿಒನ್, ಬೆಂಗಳೂರು, ಮಾರ್ಚ್. 26 : ಒಳಮೀಸಲಾತಿ ಇನ್ನು ಬಗೆಹರೆಯದ ವಸ್ತುವಾಗಿದೆ. ಬೇರೆ ಬೇರೆ ಜಾತಿಯವರು ಈ ಸಂಬಂಧ ನಿರಂತರ ಹೋರಾಟ ಮಾಡ್ತಾನೆ ಇದಾರೆ. ಆದರೂ ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ. ಈ ಸಂಬಂಧ ಬೆಂಗಳೂರಿನಲ್ಲಿ ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಒಳ ಮೀಸಲಾತಿಯನ್ನ ಜಾರಿಗೆ ತಂದಿದೆ. ಎರಡು ಸದನದಲ್ಲೂ ಕೂಡ ಒಳ ಮೀಸಲಾತಿಯ ಬಿಲ್ ಪಾಸಾಗಿದೆ. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕಿದ್ದಾರೆ. ಈಗಾಗಲೇ ಒಳ ಮೀಸಲಾತಿಯಲ್ಲಿ ಮಾದಿಗರಿಗೆ 6% ರಿಸರ್ವೇಶನ್, ಬಲಗೈನವರಿಗೆ 6%, ಉಳಿದಂತೆ 5% ನೀಡಲಾಗಿದೆ.

ಆ ಹಂಚಿಕೆಯಂತೆ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಒಳ ಮೀಸಲಾತಿ ಕೊಡುತ್ತಾ ಇದ್ದಾರೆ. ಒಳ ಮೀಸಲಾತಿ ಈಗಾಗಲೇ ಶಿಕ್ಷಣದಲ್ಲಿ ಜಾರಿಯಾಗಿದೆ.‌ ನಮ್ಮ ವಿದ್ಯಾರ್ಥಿಗಳು ಪಿಜಿ ಸೀಟ್ ಗಳನ್ನ ತೆಗೆದುಕೊಂಡಿದ್ದಾರೆ. ಈಗಾಗಲೇ ಅನುಷ್ಠಾನ ಆಗಿದೆ. ಒಳ್ಳೊಳ್ಳೆ ಸೀಟುಗಳು ನಮ್ಮ ಮಾದಿಗರಿಗೆ ಸಿಕ್ಕಿದೆ. ಎಂದು ಕೂಡ ಈ ರೀತಿಯ ಪಿಜಿ ಸೀಟುಗಳು ಸಿಕ್ಕಿರಲಿಲ್ಲ‌. ಗಗನ ಕುಸುಮವಾಗಿತ್ತು. ಈ ಒಳ ಮೀಸಲಾತಿ ಆದ್ಮೇಲೆ ನಮ್ಮವರಿಗೆ ಸಿಕ್ಕಿದೆ.

ಈಗ ಎಸ್ಸಿಗಳಿಗೆ 17% ಮಾಡೋಕೆ ಬರಲ್ಲ, 15%ನಲ್ಲಿಯೇ ಮಾಡಿಕೊಳ್ಳಬೇಕು ಅಂದಿದ್ದಾರೆ. ಕೋರ್ಟ್ ನಲ್ಲಿ ಅಫಿಡೆವಿಟ್ ಹಾಕಿ ತೆಗೆದುಕೊಂಡಿದ್ದಾರೆ. 15ಕ್ಕೆ ಮಾಡಿ. ಆ ರೇಶೂ ಪ್ರಕಾರ ಹಂಚಿಕೆ ಮಾಡಿ. ಐದೇ ನಿಮಿಷದ ಕೆಲಸ ಅದು. ಅದನ್ನ ದಿನಗಟ್ಟಲೆ ಎಳೆಯೋದು ಯಾಕೆ. ಬೇರೆ ಜಾತಿಯವರು ಬೇಡ ಅಂತಾನೇ ಅಂತಾರೆ. ನಾವೂ 35-40 ವರ್ಷದಿಂದ ಅನ್ಯಾಯ ಅನುಭವಿಸ್ತಾ ಇದ್ದೀವಿ. ಇಲ್ಲಿ ಪ್ರಬಲರಿದ್ದಾರೆ. ಅವರ ಜೊತೆಗೆ ನಾವೂ ಯುದ್ಧ ಮಾಡೋಕೆ ಆಗಲ್ಲ ಅಂತ ಪ್ರತ್ಯೇಕ ಹೋರಾಟ ಮಾಡಿ, ಮೀಸಲಾತಿ ಕೊಡಿ ಅಂತ ಹೇಳಿ ತೆಗೆದುಕೊಂಡಿದ್ದೀವಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...