ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜೂನ್.16 : ಪತ್ನಿಯ ಸೀಮಂತ ಕಾರ್ಯ ಮುಗಿಸಿಕೊಂಡು ಬಂದ ಬೆಸ್ಕಾಂ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಬೆಸ್ಕಾಂ ಹಿಂಭಾಗದ ನೌಕರರ ವಸತಿ ಗೃಹದಲ್ಲಿ ಹೊಟ್ಟೆ ನೋವು ತಾಳಲಾರದೆ ಬೆಸ್ಕಾಂ ನೌಕರ ರಘುನಾಥ್ ( 29) ನೇಣಿಗೆ ಶರಣಾಗಿದ್ದಾನೆ.
ಸಾಣೀಕೆರೆ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಸುಮಾರು ಐದು ವರ್ಷಗಳ ಹಿಂದೆ ವಿವಾಹವಾಗುದ್ದು ಪತ್ನಿ ಗರ್ಭಿಣಿಯಾಗಿದ್ದು ಭಾನುವಾರವಷ್ಟೇ ಮೊದಲ ಮಗುವಿನ ಗರ್ಭಿಣಿ ಸೀಮಂತ ಕಾರ್ಯ ಮಾಡಲಾಗಿದ್ದು ಸೋಮವಾರ ನಗರದ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದು. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.










