Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಭಿಷೇಕ್ ಮನೆಯಲ್ಲಿ ಸಡಗರ.. ಸಂಭ್ರಮ : ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ

---Advertisement---

ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಬೆಳಗ್ಗೆ ಅವಿವಾ ಬಿದ್ದಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು, ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಮತ್ತೆ ಜೂನಿಯರ್ ಅಂಬರೀಶ್ ಹುಟ್ಟಿ ಬಂದರು ಎಂದೇ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸದ್ಯ ತಾಯಿ ಮಗು ಆಸ್ಪತ್ರೆಯಲ್ಲಿಯೇ ಇದ್ದು, ಸುಮಲತಾ ಮಗು ಎತ್ತಿಕೊಂಡ ಫೋಟೋ ವೈರಲ್ ಆಗುತ್ತಿದೆ.

ಅಂಬರೀಶ್ ಅವರ ಸಮಾಧಿ ಬಳಿ ಪೂಜೆ ಸಲ್ಲಿಸಲು ಬಂದಾಗಲೇ ಅವಿವಾ ಗರ್ಭಿಣಿ ಎಂಬುದು ಎಲ್ಲರಿಗೂ ಅನುಮಾನ ಬಂದಿತ್ತು. ಆದರೆ ಸುಮಲತಾ ಆ ಬಗ್ಗೆ ಏನು ಹೇಳಿರಲಿಲ್ಲ. ಬಳಿಕ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಿದರು. ಈಗ ಮನೆಗೆ ಗಂಡು ಮಗು ಬಂದಿದ್ದಾರೆ. ಅಂಬರೀಶ್ ಅವರೇ ಮತ್ತೆ ಹುಟ್ಟಿ ಬಂದರೆಂಬ ಖುಷಿ ಎಲ್ಲರೊಳಗೂ ಇದೆ.

ಅವಿವಾ ಹಾಗೂ ಅಭಿಷೇಕ್ ಲವ್ ಮಾಡಿ ಮದುವೆಯಾದವರು. ಅವಿವಾ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ ಅವರ ಏಕ ಮಾತ್ರ ಪುತ್ರಿ. ಈಗ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಂಬಿ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಮೊಮ್ಮಗನನ್ನು ನೋಡಿ ಸಂಸದೆ ಸುಮಲತಾ ಅಂಬರೀಶ್ ತುಂಬಾನೇ ಖುಷಿಯಾಗಿದ್ದಾರೆ. ಮಗುವನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಅಭಿಮಾನಿಗಳಂತು ಮನತುಂಬಿ ಹಾರೈಸುತ್ತಿದ್ದಾರೆ. ಮತ್ತೆ ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರೇ ಹುಟ್ಟಿ ಬಂದಿರಬೇಕೆಂದು ಹೇಳುತ್ತಿದ್ದಾರೆ. ಸದ್ತ ತಾಯಿ ಮಗು ಆರೋಗ್ಯವಾಗಿದ್ದು, ಮಗು ಮುದ್ದಾಗಿದೆ ಎಂಬ ಕಮೆಂಟ್ ಗಳ ಸುರಿಮಳೆ ಸುರಿಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment