Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮಿಗೆ ಲಾಕ್ : ವರ್ತೂರು ಸಂತೋಷ್ ನ್ಯಾಯವಾಗಿ ಆಡಲಿಲ್ವಾ..?

---Advertisement---

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ನಾಲ್ಕು ಜನ ಕ್ಯಾಪ್ಟನ್ ರೇಸ್ ನಲ್ಲಿ ಉಳಿದರು. ಸಿರಿ, ಮೈಕೆಲ್, ವರ್ತೂರು ಸಂತೋಷ್ ಹಾಗೂ ಅವಿನಾಶ್. 13 ನಿಮಿಷ ಏಣಿಸಬೇಕು. ಚೇರ್ ಮೇಲೆ ಸದಸ್ಯರು ಕುಳಿತುಕೊಳ್ಳುತ್ತಾರೆ. ಅವರನ್ನು ತಿರುಗಿಸಬೇಕು. ನಂಬರ್ ಎಣಿಸುವಾಗ ಮನೆ ಮಂದಿ ಡಿಸ್ಟರ್ಬ್ ಮಾಡಬಹುದು. ಅವರು ಸರಿಯಾಗಿ ಕೌಂಟ್ ಮಾಡದ ರೀತಿ ನೋಡಿಕೊಳ್ಳಬೇಕು. ಅದನ್ನು ಮೀರಿ ಹದಿಮೂರು ನಿಮಿಷದ ಆಸುಪಾಸಿನಲ್ಲಿ ಕೌಂಟ್ ಮಾಡಿದವರು ಕ್ಯಾಪ್ಟನ್ ಆಗುತ್ತಾರೆಂಬ ಟಾಸ್ಕ್ ನೀಡಲಾಗಿತ್ತು.

https://www.instagram.com/reel/C0oiU4Ox5Q6/?igshid=ODhhZWM5NmIwOQ==

ಈ ಟಾಸ್ಕ್ ನಲ್ಲಿ ಅವಿನಾಶ್ 9 ನಿಮಿಷ ಎಣಿಸಿದರು. ಮೈಕೆಲ್, 15.15 ನಿಮಿಷ, ವರ್ತೂರು ಸಂತೋಷ್ 12.13 ನಿಮಿಷ, ಸಿರಿ 19 ನಿಮಿಷ ಎಣಿಸಿದ್ದಾರೆ. ಸಿರಿ ಎಣಿಸಿದ್ದನ್ನು ನೋಡಿ ತುಕಾಲಿ ಸಂತೋಷ್ ರೇಗಿಸಿದ್ದರು. ಬನ್ನಿ ಬನ್ನಿ 20 ನಿಮಿಷ ಎಣಿಸಿದ್ದೀರಾ ಎಂದಿದ್ದರು. ಕಡೆಗೂ ಸಿರಿ ಅವರು 19 ನಿಮಿಷ ಎಣಿಸಿದ್ದರು. ಮನೆಯವರು ಸಾಕಷ್ಟು ಡಿಸ್ಟರ್ಬ್ ಮಾಡಿದ್ದರು. ಹೀಗಾಗಿ ಎಲ್ಲರೂ ಹದಿಮೂರು ನಿಮಿಷ ಬಿಟ್ಟು ಹಡಚ್ಚಿನ ಸಂಖ್ಯೆಯಲ್ಲಿಯೇ ಎಣಿಸಿದ್ದಾರೆ. ಆದರೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು.

ಎಲ್ಲರೂ ವರ್ತೂರು ಸಂತೋಷ್ ನ್ಯಾಯಯುತವಾಗಿಯೇ ಟಾಸ್ಕ್ ಆಡಿದ್ದಾರೆ ಎಂದುಕೊಂಡಿದ್ದರು. ಆದರೆ ಸುದೀಪ್ ಬಂದು ಇಂದು ಕ್ಯಾಪ್ಟನ್ ರೂಮಿನ ಬೀಗ ಹಾಕಿದಾಗಲೇ ತಿಳಿದಿದ್ದು, ವರ್ತೂರು ಸಂತೋಷ್ ಯಾವ ರೀತಿಯಲ್ಲಿ ಟಾಸ್ಕ್ ಆಡಿ, ಕ್ಯಾಪ್ಟನ್ ಆದರೂ ಎಂಬುದು ಗೊತ್ತಾಗಿದ್ದು. ವಿನಯ್ ಎಣಿಕೆ ಮಾಡಿ, ಟೇಬಲ್ ಬಡಿದಾಗ, ವರ್ತೂರು ಸಂತೋಷ್ ಗಂಟೆ ಬಾರಿಸಿದರು. ಇದು ನೋಡುಗರ ಕಣ್ಣಿಗೆ ಅಷ್ಟಾಗಿ ಗೊತ್ತಾಗಲಿಲ್ಲ. ಆದರೆ ಕಿಚ್ಚನ ವೇದಿಕೆಯಲ್ಲಿ ಇದು ಅನಾವರಣವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment