ಹಾಸನ: ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆಯ ಸುದ್ದಿ ತಣ್ಣಗಾಗಿದೆ. 50-50 ಹಂಚಿಕೆಯಾಗಿದೆ ಎಂಬ ಮಾತು ಕಳೆದ ಕೆಲ ತಿಂಗಳ ಹಿಂದಷ್ಟೇ ಜೋರು ಸದ್ದು ಮಾಡಿತ್ತು. ಇನ್ನೇನು ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಅವರು ಬಿಟ್ಟೆ ಕೊಟ್ಟು ಬಿಟ್ಟರು ಎಂಬಷ್ಟು ಸುದ್ದಿಯಾಗಿ, ತಣ್ಣಗಾಗಿದೆ. ಆದರೆ ಸಚಿವ ಸಂಪುಟ ಪುನರ್ ರಚನೆ ವಿಚಾರ ಮಾತ್ರ ಇನ್ನು ಚರ್ಚೆಯಾಗುತ್ತಲೇ ಇದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಖಂಡಿತ ಸಚಿವ ಸಂಪುಟ ಪುನರ್ ರಚನೆಯಾಗುತ್ತದೆ. ಆದರೆ ಯಾವಾಗ ಏನು ಎಂಬುದು ಗೊತ್ತಿಲ್ಲ. ಒಂದು ಪೂರ್ಣಾವಧಿಯ ಸರ್ಕಾರವಿದ್ದಾಗ ಪುನರ್ ರಚನೆಯ ಸಾಧ್ಯತೆ ಜಾಸ್ತಿ ಇರುತ್ತದೆ. ಆದ್ರೆ ಯಾವಾಗ ಅನ್ನೋದು ಮಾತ್ರ ಗೊತ್ತಿಲ್ಲ. ಬರ್ನಿಂಗ್ ವಿಚಾರ ಯಾವುದಿದೆ ಅದಷ್ಟೇ ಮಾತಾಡ್ತಾ ಹೋದ್ರೆ ಆಗಲ್ಲ. ಹೆಚ್1, ಬಿ1 ವೀಸಾ ಬಗ್ಗೆ ಕೇಳಲ್ಲ. ನೀವೂ ಅದನ್ನ ಕೇಳಬೇಕು. ಯಾಕಂದ್ರೆ ಅದು ಪ್ರಮುಖವಾದ ವಿಚಾರ.
ಬಿಜೆಪಿಗರನ್ನ ನೀವೂ ಪ್ರಶ್ನೆ ಮಾಡಬೇಕು ಅಲ್ವಾ. ಒಕೆ ಬಿಜೆಪಿ, ಕಾಂಗ್ರೆಸ್ ಅನ್ನೋದಕ್ಕಿ ಪಾಲಿಸಿ, ಪ್ರೋಗ್ರಾಂ ಮುಖ್ಯ ಆಗುತ್ತೆ. ಬಿಹಾರದಲ್ಲಿ ಒಂದು ರೂಪಾಯಿಗೆ ಸಾವಿರ ಎಕರೆಯನ್ನ ಲೀಸ್ ಗೆ ಕೊಟ್ಟಿದ್ದಾರೆ. ಅದು ಕೋಲ್ ಮೈನಿಂಗ್ ಗೆ. ಆದರೆ ಈ ದೇಶದಲ್ಲಿ ಅದರ ಬಗ್ಗೆ ವಿಷಯವೇ ಇಲ್ಲ. ಇವತ್ತು ಇಡೀ ದೇಶ 50% ಟ್ಯಾರೀಫ್ ಹಾಕಿದ್ರೆ ಅದಕ್ಕೆ ಕಾರಣ ಒಂದು ಖಾಸಗಿ ಕಂಪನಿ ರಷ್ಯಾದಿಂದ ಇಂಪೋರ್ಟ್ ಮಾಡಿಕೊಂಡಿರುವುದು ಕಾರಣ. ಇದರ ಬಗ್ಗೆ ಯಾವುದು ಚರ್ಚೆನೆ ಇಲ್ಲ ಎಂದು ಬೇಸರ ಹಿರ ಹಾಕಿದ್ದಾರೆ. ದೇಶದಲ್ಲಿ ಇಷ್ಟೆಲ್ಲ ಸುದ್ದಿ ಇದ್ರು ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದಕ್ಕೆ ಈ ವಿಚಾರಗಳನ್ನ ಹೇಳಿ ಬೇಸರ ಹೊರ ಹಾಕಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












