ದಾವಣಗೆರೆ; ಜಿಲ್ಲೆಗೆ ಅತಿ ಹೆಚ್ಚು ಅನುದಾನ ನೀಡಿದ್ದು ಯಡಿಯೂರಪ್ಪನವರು. ಅವರು ಸಿಎಂ ಆಗಿದ್ದಾಗ ಕೊಟ್ಟಷ್ಟು ಅನುದಾನವನ್ನು ಬೇರೆ ಯಾರು ಕೊಟ್ಟಿಲ್ಲ. ಈ ಬಗ್ಗೆ ಯಾರೂ ಬೇಕಾದರೂ ಬಹಿರಂಗ ಚರ್ಚೆಗೆ ಬರಬಹುದು ಎಂದು ಪಂಥಹ್ವಾನವನ್ನು ನೀಡಿದ್ದಾರೆ. ಮೂರನೇ ಹಂತದ ಜನಾಕ್ರೋಶ ಯಾತ್ರೆಯಲ್ಲಿ ಈ ಬಗ್ಗೆ ಮಾತನಾಡುತ್ತಾ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿರುವ ಬೆಲೆ ಏರಿಕೆಯನ್ನು ಖಂಡಿಸಿ, ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ‘ಇದು ವಿಜಯೇಂದ್ರರ ವಿಜಯ ಯಾತ್ರೆಯಲ್ಲ. ಈಗ ಚುನಾವಣೆಯೂ ಇಲ್ಲ. ಇದು ಜನರಿಗಾಗಿ ನಡೆಯುತ್ತಿರುವ ಯಾತ್ರೆಯಾಗಿದೆ. ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು, ಅತಿಯಾದ ಮುಸ್ಲಿಂ ಓಲೈಕೆ, ಹಿಂದುಗಳ ಕಡೆಗಣನೆ, ಎಸ್ಸಿ/ಎಸ್ಡಿ ಅನುದಾನದಲ್ಲಿ ಭ್ರಷ್ಟಾಚಾರ ವಿರೋಧಿಸಿ ರಾಜ್ಯದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಹಾಗೇ ದಾವಣಗೆರೆಯ ಅಭಿವೃದ್ಧಿಯ ಬಗ್ಗೆಯೂ ಚರ್ಚೆಗೆ ಆಹ್ವಾನ ನೀಡಿದರು.

ಇದೆ ವೇಳೆ, ದಾವಣಗೆರೆ ಜಿಲ್ಲೆಗೆ ಯಡಿಯೂರಪ್ಪ ಹೆಚ್ಚಿನ ಅನುದಾನ ನೀಡಿದ್ದರು. ಇಲ್ಲಿನ ಡಿಸಿ ಕಚೇರಿ, ವಿಶ್ವವಿದ್ಯಾನಿಲಯ ಎಲ್ಲವನ್ನು ಕೊಟ್ಟಿದ್ದು ಯಡಿಯೂರಪ್ಪ, ರಸ್ತೆ, ಹಲವು ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದರು. ಇಲ್ಲಿಂದ ಗುಡುಗಿದರೆ ವಿಧಾನಸೌಧ ನಡುಗಲಿದೆ’ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ನಾಯಕರು ಗುಡುಗಿದರು. ಎಸ್ಸಿ ಸಮುದಾಯಗಳಿಗೆ ಒಳ ಮೀಸಲು ನೀಡುವ ವಿಷಯ ಮುನ್ನಲೆಗೆ ಬರುತ್ತಿದ್ದಂತೆ, ಸಿಎಂ ಸಿದ್ಧರಾಮಯ್ಯ, ಅದನ್ನು ಮರೆಸಲು ಜಾತಿ ಗಣತಿಯನ್ನು ಮುಂದೆ ತಂದರು. ಈ ದೇಶದಲ್ಲಿಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲದ ರಾಜಕಾರಣಿ ಎಂದರೆ ಸಿದ್ಧರಾಮಯ್ಯ ಮಾತ್ರ. ಬರಿ ಮಾತಿನಲ್ಲಿ, ಭಾಷಣದಲ್ಲಿಮಾತ್ರ ಸಾಮಾಜಿಕ ನ್ಯಾಯ ಎಂದು ಮಾತನಾಡುತ್ತಾರೆ. ಮುಸ್ಲಿಂರಲ್ಲಿದಲಿತ, ಮೋಚಿ, ಚಮ್ಮಾರ ಮುಸ್ಲಿಂರಿದ್ದಾರೆ, ಅವರಿಗೆ ಮೀಸಲು ಕೊಡಿ ಎಂದು ಸವಾಲು ಹಾಕಿದ ಅವರು, ದೇಶದಲ್ಲಿನಂ.1 ಭ್ರಷ್ಟಾಚಾರ ಸರಕಾರ ಎಂದರೆ ಸಿದ್ಧರಾಮಯ್ಯ ಸರಕಾರ’ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.















