Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಬಸ್ ದುರಂತ : ಗಾಯಾಳುಗಳ ಪರಿಸ್ಥಿತಿ ವಿವರಿಸಿದ ಗೋವಿಂದ ಕಾರಜೋಳ

---Advertisement---

ಚಿತ್ರದುರ್ಗ: ರಜೆ ಇದೆ.. ಕೆಲಸದ ಒತ್ತಡದಿಂದ ಕೊಂಚ ರಿಲ್ಯಾಕ್ಸ್ ಆಗೋಣಾ ಅಂತ ಹೊರಟಿದ್ದವರು ಇಂದು ಮಸಣ ಸೇರಿದ್ದಾರೆ. ಹಲವರು ಆಸ್ಪತ್ರೆ ಸೇರಿದ್ದಾರೆ. ಗಾಯಾಳುಗಳನ್ನು ನೋಡಲು ಸ್ಥಳೀಯ ಸಂಸದರಾದ ಗೋವಿಂದ ಕಾರಜೋಳ ಅವರು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಉಳಿದವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಗಾಯಗಳ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ಗಾಯಾಳುಗಳ ಪರಿಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ತಲೆಗೆ ಪೆಟ್ಟಾಗಿದೆ. ಬ್ರೈನ್ ಗೆ ಸ್ವಲ್ಪ ಪೆಟ್ಟು ಬಿದ್ದಿದೆ. ನಾವೇ ಟ್ರೀಟ್ಮೆಂಟ್ ಮಾಡ್ತೀವಿ ಅಂತ ಹೇಳಿದ್ದಾರೆ‌. ಗಾಯಾಳುಗಳನ್ನ ಬೆಂಗಳೂರು ಅಥವಾ ಧಾರವಾಡಕ್ಕೆ ಶಿಫ್ಟ್ ಮಾಡೋಣಾ ಅಂತ ನಾನೇ ಕೇಳಿದೆ. ಬೇಡ ಅವರಿಗೆ ನಾವೇ ಚಿಕಿತ್ಸೆ ನೀಡುತ್ತೇವೆ. ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಹೀಗಾಗಿ ವೈದ್ಯರಿಗೂ ಮನವಿ ಮಾಡಿದ್ದೇನೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿ ಎಂದಿದ್ದೇನೆ.

ನಾನು ಬೆಳಗ್ಗಿನ ಜಾವ ವಿಚಾರ ಗೊತ್ತಾದ ಕೂಡಲೇ ನಮ್ಮ ಐಜಿಪಿ ರವಿಕಾಂತೇಗೌಡರಿಗೆ ಮಾತನಾಡಿದ್ದೇನೆ. 9 ಜನ ಮೃತರ ದೇಹಗಳನ್ನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡುವಂತಹ ಕೆಲಸವನ್ನ ಮಾಡಿದ್ದೀವಿ. ಪೋಸ್ಟ್ ಮಾರ್ಟಮ್ ಕೆಲಸವೂ ಆಗಬೇಕಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ. ಅದಕ್ಕಾಗಿ ನಾನು ಎಲ್ಲಾ ಆಸ್ಪತ್ರೆಗೂ ಹೋಗಿ ನೋಡುತ್ತಾ ಇದ್ದೇನೆ. ಅವರಿಗೆ ಏನು ಸಹಕಾರ ಬೇಕು, ಅನುಕೂಲತೆ ಬೇಕು ಅದೆಲ್ಲದಕ್ಕೂ ಕೂಡ ನಾನು ಸಹಕಾರ ಮಾಡುತ್ತೇನೆ. ಚಾಲಜರು ಬೇಜವಬ್ದಾರಿಯಿಂದ ಓಡಿಸುವಂತದ್ದು, ಟ್ರಾಫಿಕ್ ನಿಯಮಗಳನ್ನ ಮೀರಿ ಚಾಲನೆ ಮಾಡುವಂತದ್ದು ಇದೆಲ್ಲ ದುರಂತಕ್ಕೆ ಕಾರಣವಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now