Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಿವಮೊಗ್ಗದ ಜೈಲಿಗೆ ಶಿಫ್ಟ್ ಆದ ಬುರುಡೆ ಚಿನ್ನಯ್ಯ

---Advertisement---

 

ಧರ್ಮಸ್ಥಳದಲ್ಲಿ ನಾನೇ ಹೆಣಗಳನ್ನ ಹೂತಾಕಿದ್ದೀನಿ ಅಂತ ಬಂದು ಸೆನ್ಸೇಷನ್ ಸೃಷ್ಟಿ ಮಾಡಿದ್ದ ಚಿನ್ನಯ್ಯ ಇದೀಗ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬೆಳ್ತಂಗಡಿಯ ಜೆಎಂಎಫ್ಸಿ ಕೋರ್ಟ್ ಈ ಆದೇಶವನ್ನ ಹೊರಡಿಸಿದೆ. ನ್ಯಾಯಾಂಗ ಬಂಧನಕ್ಕೆ ನೀಡಿರುವ ಕೋರ್ಟ್ ಶಿವಮೊಗ್ಗ ಜೈಲಿಗೆ ಶಿಫ್ಟ್‌ ಮಾಡಿದೆ. ಮಧ್ಯರಾತ್ರಿ 1.20ರ ಸಮಯಕ್ಕೆ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ಇಂದಿನಿಂದ ಕಾವೇರಿ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.

ಬೆಳ್ತಂಗಡಿ ಕೋರ್ಟ್ ನಿಂದ ಶಿವಮೊಗ್ಗ ಕೋರ್ಟ್ ಗೆ ಶಿಫ್ಟ್ ಮಾಡುವಾಗ ಚಿನ್ನಯ್ಯ ಪಶ್ಚಾತ್ತಾಪದ ಭಾವದಲ್ಲಿದ್ದ ಎನ್ನಲಾಗಿದೆ. ಯಾಕಂದ್ರೆ ಶಿವಮೊಗ್ಗ ಜೈಲು ಸೇರುವಾಗ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ. ‌ಶಿವಮೊಗ್ಗದ ಬಳಿ ವಾಹನದಿಂದ ಇಳಿದು ಹೋಗುವಾಗ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ. ಈ ಎಲ್ಲಾ ಬೆಳವಣಿಗೆಗಳು ಆತನಿಗೆ ಪಾಪ ಪ್ರಜ್ಞೆ ಕಾಡಿತ್ತಾ ಎಂಬ ಪ್ರಶ್ನೆಯನ್ನ ಹುಟ್ಟು ಹಾಕಿದೆ.

ಧರ್ಮಸ್ಥಳದಲ್ಲಿ ನಾನು ಈ ಮೊದಲು ಕೆಲಸ ಮಾಡುತ್ತಿದ್ದೆ. ಹೆಣಗಳನ್ನ ಹೂತು ಹಾಕಿದ್ದೇನೆ ಎಂದು ಒಂದು ಬುರುಡೆಯನ್ನು ಇಟ್ಟುಕೊಂಡು ನೇರವಾಗಿ ಕೋರ್ಟ್ ಮುಂದೆ ಹಾಜರಾಗಿದ್ದ ಈ ಚಿನ್ನಯ್ಯ. ಆಮೇಲೆ ಸರ್ಕಾರವೂ ಎಸ್ಐಟಿಗೆ ಕೇಸ್ ಅನ್ನು ವಹಿಸಿತ್ತು. ಆತ ತೋರಿಸಿದ ಜಾಗದಲ್ಲೆಲ್ಲಾ ಅಗೆದರು ಹೆಣ ಮಾತ್ರ ಸಿಕ್ಕಿರಲಿಲ್ಲ. ಈ ಸಂಬಂಧ ಧರ್ಮಸ್ಥಳದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾನೆ ಇದೆ. ಸದ್ಯ ಎಸ್ಐಟಿ ಅಧಿಕಾರಿಗಳು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ 850 ಕೈದಿಗಳಿರುವ ಜೈಲಿಗೆ ಈಗ ಚಿನ್ನಯ್ಯನನ್ನು ಶಿಫ್ಟ್ ಮಾಡಿದ್ದಾರೆ‌. ಕಣ್ಣೀರಿಡುತ್ತಲೇ ಜೈಲಿಗೆ ಚಿನ್ನಯ್ಯ ಹೋಗಿದ್ದಾರೆ ಎನ್ನಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment