ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿಚಾರಗಳು ಹೊಗೆಯಾಡುತ್ತಿವೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು. ಸಿದ್ದರಾಮಯ್ಯ ಸಾಲು ಸಾಲು ಟ್ವೀಟ್ ಮಾಡಿದ್ದರು. ಇದೀಗ ಆರ್ ಎಸ್ ಎಸ್ ಚಡ್ಡಿ ಸುಡುವ ಅಭಿಯಾನ ಜೋರಾಗಿದೆ. ಕಾಂಗ್ರೆಸ್ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಆದ್ರೆಬಿದರ ನಡುವೆ ಒಂದೊಳ್ಳೆ ಫೋಟೋ ವೈರಲ್ ಆಗುತ್ತಿದೆ.
ಈ ಎಲ್ಲಾ ಜಂಜಾಟದ ನಡುವೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಟ್ಟಾಗಿದ್ದಾರೆ. ಕೂತು ಹರಟೆ ಹೊಡೆದಿದ್ದಾರೆ. ರಾಜಕೀಯ ಚರ್ಚೆ ನಡೆಸಿದ್ದಾರೆ. ಇದ್ಯಾವುದೋ ಹಳೆಯ ಫೋಟೋ ಅಲ್ಲ. ಇಂದಿನದ್ದೇ ಫೋಟೋ. ಸದ್ಯ ವೈರಲ್ ಆಗುತ್ತಿರುವ ಈ ಬಾಂಧವ್ಯದ ಫೋಟೋ ಇಂದಿ ಏರ್ಪೋರ್ಟ್ ನಲ್ಲಿ ತೆಗೆದದ್ದು.
ರಾಜಕೀಯವೇ ಬೇರೆ ಸಂಬಂಧಗಳೇ ಬೇರೆ ಎಂಬುದನ್ನು ರಾಜಕೀಯ ವ್ಯಕ್ತಿಗಳು ಆಗಾಗ ಪ್ರೂವ್ ಮಾಡುತ್ತಾ ಇರುತ್ತಾರೆ. ಅದನ್ನು ಹೇಳುತ್ತಲೂ ಇರುತ್ತಾರೆ. ವಿಧಾನಪರಿಷತ್ ಚುನಾವಣಾ ಹಿನ್ನೆಲೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಪ್ರವಾಸ ಕೈಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಉಭಯ ಕುಶಲೋಪರಿ ನಡೆಸಿದ್ದಾರೆ ಎನ್ನಲಾಗಿದೆ.