Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ಯುದ್ಧ : ಶಿಶಿರ್ ಗೆ ಸವಾಲು ಹಾಕಿದ ಚೈತ್ರಾ..!

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶಿಶಿರ್ ಹಾಗೂ ಚೈತ್ರಾ ಅಣ್ಣ ತಂಗಿಯಂತೆ. ಚೈತ್ರಾ ಕುಗ್ಗಿದಾಗೆಲ್ಲ ಶಿಶಿರ್ ಧೈರ್ಯ ತುಂಬಿದ್ದಾರೆ. ಅದಕ್ಕಾಗಿಯೇ ಬಿಗ್ ಬಾಸ್ ತಂಗಿ ನಿನಗಾಗಿ ಎಂಬ ಫೋಸ್ಟರ್ ಅನ್ನೇ ರಿಲೀಸ್ ಮಾಡಿತ್ತು. ಇದೀಗ ಮನೆಯಲ್ಲಿ ಅಣ್ಣ ತಂಗಿ ನಡುವೆಯೇ ಯುದ್ಧ ಜೋರಾಗಿದೆ. ಅಣ್ಣನಿಗೆ ತಂಗಿ ಸವಾಲು ಹಾಕಿದ್ದಾರೆ.

ಬಿಗ್ ಬಾಸ್ ಆಗಾಗ ಎಲ್ಲವನ್ನು ಪ್ರೂವ್ ಮಾಡಿಕೊಳ್ಳುವುದಕ್ಕೆ ಒಂದಷ್ಟು ಟಾಸ್ಕ್ ಗಳನ್ನು ನೀಡುತ್ತಾ ಇರುತ್ತಾರೆ. ಆ ಟಾಸ್ಕ್ ಗಳಿಂದ ಫಿಸಿಕಲೀ ಡ್ಯಾಮೇಜ್ ಮಾಡಿಕೊಳ್ಳುವ ಸಾಧ್ಯತೆಯು ಇರುವುದರ ಜೊತೆಗೆ, ಮೆಂಟಲಿ ಡಿಸ್ಟರ್ಬ್ ಕೂಡ ಆಗ್ತಾರೆ, ಜೋರು ಜಗಳ ಮಾಡ್ತಾರೆ. ಟಾಸ್ಕ್ ಬಂದಾಗ ಮನೆ ಮಂದಿ ರೊಚ್ಚಿಗೆದ್ದು ಆಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಇಂದು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿತ್ತು. ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿದ್ದ ಈ ಟಾಸ್ಕ್ ನಲ್ಲಿ ಕೆಂಪು ತಂಡದಿಂದ ಮಂಜು ಹಾಗೂ ರಜತ್ ಆಡುತ್ತಿದ್ದರು. ನೀಲಿ ಟೀಂನಿಂದ ತ್ರಿವಿಕ್ರಮ್ ಹಾಗೂ ಧರ್ಮ ಆಡುತ್ತಿದ್ದರು. ಈ ಟಾಸ್ಕ್ ನಡುವೆಯೇ ಶಿಶಿರ್ ಹಾಗೂ ಚೈತ್ರಾ ನಡುವೆ ಜಗಳ ಹತ್ತಿಕೊಂಡಿದೆ.

ಸೋಲುತ್ತೇವೆ ಎಂಬ ಭಯ ಇದ್ದಾಗಲೇ ಹೀಗೆ ಆಡೋದು ಅಂತ ಚೈತ್ರಾ, ಶಿಶಿರ್ ಗೆ ಹೇಳ್ತಾರೆ. ಬರೀ ಮಾತು..ಮಾತು..ಮಾತು ಎಂದು ಶಿಶಿರ್ ಜೋರು ಮಾಡಿದ್ದಾರೆ. ಸುಮ್ನೆ ಹೋಗು ಆ ಕಡೆ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಚೈತ್ರಾ, ಇದನ್ನ ಬಿಟ್ಟು ನಿಮ್ಗೆ ಬೇರೆ ಏನು ಹೇಳುವುದಕ್ಕೆ ಬರುತ್ತೆ ನಿಮ್ಗೆ‌ ಆ ಕಡೆ ಹೋಗು ಅಂತ ಹೇಳುವುದಕ್ಕೆ ನಿಮಗೆ ಯಾವ ಅಧಿಕಾರವೂ ಇಲ್ಲ. ಆ ಕಡೆ ಹೋಗಲ್ಲ ಇಲ್ಲಿಯೇ ನಿಂತುಕೊಳ್ತೀನಿ. ತಾಕತ್ ಇದ್ರೆ ತಡೀರಿ ನೋಡ್ತೀನಿ ಎಂದು ಸವಾಲು ಹಾಕಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment