ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶಿಶಿರ್ ಹಾಗೂ ಚೈತ್ರಾ ಅಣ್ಣ ತಂಗಿಯಂತೆ. ಚೈತ್ರಾ ಕುಗ್ಗಿದಾಗೆಲ್ಲ ಶಿಶಿರ್ ಧೈರ್ಯ ತುಂಬಿದ್ದಾರೆ. ಅದಕ್ಕಾಗಿಯೇ ಬಿಗ್ ಬಾಸ್ ತಂಗಿ ನಿನಗಾಗಿ ಎಂಬ ಫೋಸ್ಟರ್ ಅನ್ನೇ ರಿಲೀಸ್ ಮಾಡಿತ್ತು. ಇದೀಗ ಮನೆಯಲ್ಲಿ ಅಣ್ಣ ತಂಗಿ ನಡುವೆಯೇ ಯುದ್ಧ ಜೋರಾಗಿದೆ. ಅಣ್ಣನಿಗೆ ತಂಗಿ ಸವಾಲು ಹಾಕಿದ್ದಾರೆ.
ಬಿಗ್ ಬಾಸ್ ಆಗಾಗ ಎಲ್ಲವನ್ನು ಪ್ರೂವ್ ಮಾಡಿಕೊಳ್ಳುವುದಕ್ಕೆ ಒಂದಷ್ಟು ಟಾಸ್ಕ್ ಗಳನ್ನು ನೀಡುತ್ತಾ ಇರುತ್ತಾರೆ. ಆ ಟಾಸ್ಕ್ ಗಳಿಂದ ಫಿಸಿಕಲೀ ಡ್ಯಾಮೇಜ್ ಮಾಡಿಕೊಳ್ಳುವ ಸಾಧ್ಯತೆಯು ಇರುವುದರ ಜೊತೆಗೆ, ಮೆಂಟಲಿ ಡಿಸ್ಟರ್ಬ್ ಕೂಡ ಆಗ್ತಾರೆ, ಜೋರು ಜಗಳ ಮಾಡ್ತಾರೆ. ಟಾಸ್ಕ್ ಬಂದಾಗ ಮನೆ ಮಂದಿ ರೊಚ್ಚಿಗೆದ್ದು ಆಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಇಂದು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿತ್ತು. ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿದ್ದ ಈ ಟಾಸ್ಕ್ ನಲ್ಲಿ ಕೆಂಪು ತಂಡದಿಂದ ಮಂಜು ಹಾಗೂ ರಜತ್ ಆಡುತ್ತಿದ್ದರು. ನೀಲಿ ಟೀಂನಿಂದ ತ್ರಿವಿಕ್ರಮ್ ಹಾಗೂ ಧರ್ಮ ಆಡುತ್ತಿದ್ದರು. ಈ ಟಾಸ್ಕ್ ನಡುವೆಯೇ ಶಿಶಿರ್ ಹಾಗೂ ಚೈತ್ರಾ ನಡುವೆ ಜಗಳ ಹತ್ತಿಕೊಂಡಿದೆ.
ಸೋಲುತ್ತೇವೆ ಎಂಬ ಭಯ ಇದ್ದಾಗಲೇ ಹೀಗೆ ಆಡೋದು ಅಂತ ಚೈತ್ರಾ, ಶಿಶಿರ್ ಗೆ ಹೇಳ್ತಾರೆ. ಬರೀ ಮಾತು..ಮಾತು..ಮಾತು ಎಂದು ಶಿಶಿರ್ ಜೋರು ಮಾಡಿದ್ದಾರೆ. ಸುಮ್ನೆ ಹೋಗು ಆ ಕಡೆ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಚೈತ್ರಾ, ಇದನ್ನ ಬಿಟ್ಟು ನಿಮ್ಗೆ ಬೇರೆ ಏನು ಹೇಳುವುದಕ್ಕೆ ಬರುತ್ತೆ ನಿಮ್ಗೆ ಆ ಕಡೆ ಹೋಗು ಅಂತ ಹೇಳುವುದಕ್ಕೆ ನಿಮಗೆ ಯಾವ ಅಧಿಕಾರವೂ ಇಲ್ಲ. ಆ ಕಡೆ ಹೋಗಲ್ಲ ಇಲ್ಲಿಯೇ ನಿಂತುಕೊಳ್ತೀನಿ. ತಾಕತ್ ಇದ್ರೆ ತಡೀರಿ ನೋಡ್ತೀನಿ ಎಂದು ಸವಾಲು ಹಾಕಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್