Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಲೋಕಸಭೆಯಲ್ಲಿ ಒಂದೇ ಮಾತರಂ ತಿದ್ದುಪಡಿ ಮಸೂದೆ-2026 ಅಂಗೀಕಾರ

---Advertisement---

ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ಅಪಮಾನ ಮಾಡುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ‘ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಡೆ (ತಿದ್ದುಪಡಿ) ಮಸೂದೆ-2026’ಕ್ಕೆ ಸಂಸತ್ತು ಅಂತಿಮ ಅಂಗೀಕಾರ ನೀಡಿದೆ. ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಯು, ಬುಧವಾರ ಲೋಕಸಭೆಯಲ್ಲೂ ಅಂಗೀಕಾರಗೊಳ್ಳುವ ಮೂಲಕ ಕಾನೂನಾಗಿ ಜಾರಿಯಾಗುವ ಹಂತಕ್ಕೆ ತಲುಪಿದೆ.

ಈ ನೂತನ ಶಾಸನವು 1971ರ ‘ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಡೆ ಕಾಯ್ದೆ’ಗೆ ತಿದ್ದುಪಡಿ ತರಲಿದ್ದು, ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಕೂಡ ಇದರ ವ್ಯಾಪ್ತಿಗೆ ತರಲಿದೆ. ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯಡಿ ರಾಷ್ಟ್ರಧ್ವಜ, ಸಂವಿಧಾನ ಹಾಗೂ ರಾಷ್ಟ್ರಗೀತೆಗೆ ಅಪಮಾನ ಉಂಟುಮಾಡಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ವಂದೇ ಮಾತರಂ ಗೀತೆಯನ್ನು ಹಾಡುವಾಗ ಭಂಗ ತರುವುದು, ಅಡ್ಡಿಪಡಿಸುವುದು ಅಥವಾ ಗೌರವಕ್ಕೆ ಧಕ್ಕೆ ತರುವುದಕ್ಕೂ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು 1875ರಲ್ಲಿ ರಚಿಸಿದ ಹಾಗೂ 1882ರ ‘ಆನಂದಮಠ’ ಕಾದಂಬರಿಯಲ್ಲಿ ಪ್ರಕಟಗೊಂಡ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ತಿದ್ದುಪಡಿಯನ್ನು ತಂದಿದೆ. ಸ್ವಾತಂತ್ರ್ಯ ಸಂಗ್ರಾಮದ ನೈಜ ಪ್ರತಿಫಲನವಾಗಿರುವ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಈ ಗೀತೆಯ ಗೌರವವನ್ನು ರಕ್ಷಿಸುವುದು ಈ ಮಸೂದೆಯ ಮೂಲ ಉದ್ದೇಶ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದ್ದಾರೆ.

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸದಸ್ಯರು ನಡೆಸುತ್ತಿದ್ದ ತೀವ್ರ ಪ್ರತಿಭಟನೆ ಹಾಗೂ ಗದ್ದಲದ ನಡುವೆಯೇ ಈ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಜುಲೈ 24ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಈ ವಿಧೇಯಕವು ಜುಲೈ 29ರಂದು ಮೇಲ್ಮನೆಯಲ್ಲಿ ಮತ್ತು ಜುಲೈ 30ರಂದು ಲೋಕಸಭೆಯಲ್ಲಿ ಅಂಗೀಕಾರದ ಮುದ್ರೆ ಪಡೆದುಕೊಂಡಿದೆ.

Join WhatsApp

Join Now

Join Telegram

Join Now