Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಗಾನಸರಸ್ವತಿ ಎಸ್. ಜಾನಕಿಯವರಿಗೆ ‘ರಾಗ ನಮನ’: ರೋಟರಿ ಸಂಸ್ಥೆಗಳಿಂದ ಗಾಯನ ಕಾರ್ಯಕ್ರಮ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜು 30 : ಗಾನ ಸರಸ್ವತಿ ಎಸ್. ಜಾನಕಿ ಅಮ್ಮ ಅವರ ಕಂಠಸಿರಿ ಭಾರತೀಯ ಚಿತ್ರ ಸಂಗೀತದ ಚಿನ್ನದ ಅಧ್ಯಾಯವಾಗಿದೆ. ಅವರ ಹಾಡುಗಳು ಕಾಲವನ್ನು ಮೀರಿ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಅನುರಣಿಸುತ್ತಿವೆ ಎಂದು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷ ರೊ. ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಆಫ್ ಚಿತ್ರದುರ್ಗ, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ, ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಜೆ ಚಿತ್ರದುರ್ಗದ ಎಸ್‍ಆರ್‍ಬಿಎಂಎಸ್ ರೋಟರಿ ಬಾಲಭವನದಲ್ಲಿ ಕನ್ನಡದ ಹೆಮ್ಮೆಯ ಹಿನ್ನೆಲೆ ಗಾಯಕಿ, ಗಾನ ಸರಸ್ವತಿ ಎಸ್. ಜಾನಕಿ ಅಮ್ಮ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ “ರಾಗ ನಮನ” ಎಂಬ ವಿಶೇಷ ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಎಸ್. ಜಾನಕಿ ಅಮ್ಮ ತಮ್ಮ ಅಪರೂಪದ ಗಾಯನದಿಂದ ಹಲವು ದಶಕಗಳ ಕಾಲ ಸಂಗೀತಾಸಕ್ತರ ಮನಸ್ಸುಗಳನ್ನು ಗೆದ್ದ ಮಹಾನ್ ಗಾಯಕಿ. ಅವರ ಕಂಠಸಿರಿ, ಸರಳತೆ ಹಾಗೂ ಸಂಗೀತದ ಮೇಲಿನ ಸಮರ್ಪಣೆ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರುತ್ತದೆ. ಇಂತಹ ಮಹಾನ್ ಕಲಾವಿದರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂಗೀತವು ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿದ್ದು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ರೋಟರಿ ಸದಾ ಮಾಡುತ್ತಿರುತ್ತದೆ” ಎಂದು ಹೇಳಿದರು.

ರಾಗ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕರಾದ ಕಾರ್ತಿಕ್ ಮಾತನಾಡಿ, ಎಸ್. ಜಾನಕಿ ಅಮ್ಮ ಅವರ ಸಂಗೀತ ಸಾಧನೆ, ಅವರ ಗಾಯನದ ವೈಶಿಷ್ಟ್ಯ ಹಾಗೂ ಯುವ ಗಾಯಕರಿಗೆ ಅವರು ನೀಡಿದ ಪ್ರೇರಣೆಯನ್ನು ವಿವರಿಸಿದರು.

ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಅಧ್ಯಕ್ಷ ರೊ. ಶಶಿಧರ್ ರಾವ್ ಸೇರಿದಂತೆ ವಿವಿಧ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್‍ಗಳ ಅಧ್ಯಕ್ಷರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರಾಗ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ ಕಾರ್ತಿಕ್ ಹಾಗೂ ಅವರ ತಂಡವನ್ನು ಸನ್ಮಾನಿಸಲಾಯಿತು. ಅಲ್ಲದೆ, ಚಿತ್ರದುರ್ಗದ ಎಲ್ಲಾ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್‍ಗಳ ವತಿಯಿಂದ ರಾಗ ಮ್ಯೂಸಿಕ್ ಅಕಾಡೆಮಿಗೆ ಕೀಬೋರ್ಡ್ ಸಂಗೀತ ವಾದ್ಯವನ್ನು ಉಡುಗೊರೆಯಾಗಿ ನೀಡಿ ಯುವ ಸಂಗೀತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಯಿತು.ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅಮ್ಮ ಅವರು ಅಮರಗೊಳಿಸಿದ ಅನೇಕ ಜನಪ್ರಿಯ ಕನ್ನಡ ಹಾಗೂ ದಕ್ಷಿಣ ಭಾರತೀಯ ಚಲನಚಿತ್ರ ಗೀತೆಗಳನ್ನು ಗಾಯನ ಕಲಾವಿದರು ಪ್ರಸ್ತುತಪಡಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now