Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಕರ್ನಾಟಕ SSLC ಪರೀಕ್ಷೆ–2 ಫಲಿತಾಂಶ ಪ್ರಕಟ : ಮೊಬೈಲ್‌ ನಲ್ಲೇ ಫಲಿತಾಂಶ ನೋಡಿ

---Advertisement---

ಸುದ್ದಿಒನ್,ಬೆಂಗಳೂರು,ಮೇ.30 :ಕರ್ನಾಟಕ 2026ರ ಸಾಲಿನ ಎಸ್‌ಎಸ್‌ಎಲ್‌ಸಿ ‘ಪರೀಕ್ಷೆ-2’ (SSLC Exam 2 Result) ರಿಸಲ್ಟ್ ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದು ಟೆನ್ಷನ್‌ನಲ್ಲಿದ್ದ ವಿದ್ಯಾರ್ಥಿಗಳು ಇಂದಿನಿಂದಲೇ ತಮ್ಮ ಅಂಕಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪರೀಕ್ಷಿಸಿಕೊಳ್ಳಬಹುದು.

ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ ಸೈಟ್‌ಗಳು

ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ತಿಳಿಯಲು ಕೆಳಗಿನ ಅಧಿಕೃತ ಲಿಂಕ್‌ಗಳನ್ನು ಬಳಸಬಹುದು. ನಿಮ್ಮ ರಿಜಿಸ್ಟರ್ ನಂಬರ್ (Register Number) ನಮೂದಿಸಿ ತಕ್ಷಣವೇ ಮಾರ್ಕ್ಸ್ ಕಾರ್ಡ್ ನೋಡಬಹುದು:

karresults.nic.in

kseab.karnataka.gov.in

ಒಂದು ವೇಳೆ ಇಂಟರ್ನೆಟ್ ಕೈಕೊಟ್ಟರೆ ಅಥವಾ ಸರ್ವರ್ ಬ್ಯುಸಿಯಾಗಿದ್ದರೆ ವಿದ್ಯಾರ್ಥಿಗಳು ಗಾಬರಿಯಾಗಬೇಕಿಲ್ಲ. ಮಂಡಳಿಯಲ್ಲಿ ನೋಂದಣಿಯಾಗಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಎಸ್‌ಎಂಎಸ್ (SMS) ಮೂಲಕ ರಿಸಲ್ಟ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ, ನೀವು ‘Karnataka One’ ಮೊಬೈಲ್ ಆಪ್ ಬಳಸಿಕೊಂಡು ಸಹ ನಿಮ್ಮ ಫಲಿತಾಂಶವನ್ನು ಕೈಯಲ್ಲೇ ನೋಡಬಹುದು.

ಡಿಜಿಲಾಕರ್‌ ನಿಂದ ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡಿ

ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳ ಡಿಜಿಟಲ್ ಮಾರ್ಕ್ಸ್ ಕಾರ್ಡ್‌ಗಳನ್ನು (Marks Card) ಸುರಕ್ಷಿತವಾಗಿ ಡಿಜಿಲಾಕರ್ (DigiLocker) ಖಾತೆಗೆ ಅಪ್‌ಲೋಡ್ ಮಾಡಲಾಗಿದೆ.

ಅಂಕಪಟ್ಟಿ ಡೌನ್‌ಲೋಡ್ ಮಾಡಲು ಭೇಟಿ ನೀಡಿ: digilocker.gov.in

Join WhatsApp

Join Now

Join Telegram

Join Now