Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನೇ ಸೋನಿಯಾ ಗಾಂಧಿ ಬಳಿ ಕರೆದುಕೊಂಡು ಹೋಗಿದ್ದೆ ಎಂದಿದ್ದ ಬಿಆರ್ ಪಾಟೀಲ್ ಇಂದು ಸಿದ್ದರಾಮಯ್ಯ ಬಗ್ಗೆ ಉಲ್ಟಾ ಹೊಡೆದ್ರು..!

---Advertisement---

ಬೆಂಗಳೂರು: ಶಾಸಕ ಬಿಆರ್ ಪಾಟೀಲ್ ವಸತಿ ಯೋಜನೆಯ ಅವ್ಯವಹಾರದ ಬಗ್ಗೆ ಮಾತನಾಡಿ ಎಲ್ಲರ ಕಣ್ಣಿಗೆ ಗುರಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ನಿನ್ನೆ ಹೇಳಿದ ಮಾತು ಬೇರೆ ಇಂದು ಉಲ್ಟಾ ಹೊಡೆದಿದ್ದಾರೆ. ಲಾಟರಿ ಸಿಎಂ ಅವರು. ನಾನೇ ಸೋನಿಯಾ ಗಾಂಧಿ ಬಳಿ ಕರೆದುಕೊಂಡು ಹೋಗಿದ್ದು. ಅವನ ಗ್ರಹಚಾರ ಚೆನ್ನಾಗಿತ್ತು ಅವ್ನು ಆಗ್ಬಿಟ್ಟ. ಅದೃಷ್ಟ ಇತ್ತು ಮುಖ್ಯಮಂತ್ರಿ ಆದ್ರೂ ಎಂಬ ಮಾತನ್ನ ಹೇಳಿದ್ದರು. ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ಮಾತನಾಡಿದ್ದಾರೆ. ಹಾಗಾದ್ರೆ ಬಿ ಆರ್ ಪಾಟೀಲ್ ಹೇಳಿದ್ದೇನು ಎಂಬ ವಿಚಾರ ಇಲ್ಲಿದೆ.

ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ‌. ತೇಜೋವಧೆ ಮಾಡಲಾಗಿದೆ. ನಾನಿವತ್ತು ಕೆ ಆರ್ ಪೇಟೆಯಲ್ಲಿ ಯಾರೋ ನನ್ನ ಆತ್ಮೀಯ ಸ್ನೇಹಿತ ಮಾತನಾಡುವಾಗ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪ ಆದಾಗ, ನಾನು ಕೆಲವೊಂದು ಮಾತನಾಡಿದ್ದೇನೆ. ಲಕ್ಕಿ ಲಾಟರಿ ಇತ್ತು ಅವರು ಸಿಎಂ ಆದ್ರೂ ಅಂದೆ. ನಾನು ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡ್ಸಿದ್ದೀನಿ ಅಂತ ಹೇಳಿದ್ದು ಸಂಪೂರ್ಣ ತಪ್ಪು. ಸೋನಿಯಾ ಗಾಂಧಿ ಭೇಟಿ ಮಾಡಿಸುವಾಗ ಜೊತೆಗೆ ಹೋಗಿದ್ದೆ. ಅವರೊಬ್ಬ ಮಾಸ್ ಲೀಡರ್. ಅವರನ್ನ ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ಆತ್ಮೀಯ ಸಂಬಂಧವನ್ನ ಹಾಳು ಮಾಡುವುದಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಒಂಭತ್ತು ಜ‌ನ ನಾಯಕರು ಅವರ ನೇತೃತ್ವದಲ್ಲಿಯೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆವು. ಅವರ ಜನ ಬೆಂಬಲವನ್ನು ನೋಡಿ ಮುಖ್ಯಮಂತ್ರಿ ಮಾಡಿದೆ ನಾವಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment