Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ‌ ಬಾಲಿವುಡ್ ಗಾಯಕ ಆರೋಪ: ಜೀವಬೆದರಿಕೆಯ ಜೊತೆಗೆ ಏನೆಲ್ಲಾ ಹೇಳಿದ್ರು..?

---Advertisement---

 

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಫೇಮಸ್ ಗಾಯಕ ಲಕ್ಕಿ ಅಲಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ನಲ್ಲಿ, ಭೂಮಾಫಿಯಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಹಾಕಿದ್ದಾರೆ.

‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ‌ ಮತ್ತು ಪತಿ ಐಎಎಸ್ ಸುಧೀರ್ ರೆಡ್ಡಿ ಭೂ ಮಾಫಿಯಾ ಜೊತೆಗೆ ಕೈ ಜೋಡಿಸಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಯಲಹಂಕ ಬಳಿ ಇರುವ ನನ್ನ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಲವಂತವಾಗಿ ನನ್ನ ಜಮೀನನ್ನು ಕಬಳಿಸುವ ಯತ್ನ ನಡೆಯುತ್ತಿದೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದೆ. ಕಳೆದ ಐವತ್ತು ವರ್ಷಗಳಿಂದ ನಾನು ಅಲ್ಲಿ ವಾಸ ಮಾಡುತ್ತಿದ್ದೇನೆ. ಸ್ಥಳೀಯ ರೌಡಿಗಳನ್ನು ನನ್ನ ಮೇಲೆ ದಾಳಿ ಮಾಡಲು ಸೇರಿಸಿಕೊಂಡಿದ್ದಾರೆ.

ಲಕ್ಕಿ ಅವರ ತಂದೆ ಮೊಹಮ್ಮದ್ ಅಲಿ 1969ರಲ್ಲಿ ಯಲಹಂಕ ಬಳಿ 400 ಎಕರೆ ಜಮೀನನ್ನು ಖರೀದಿ ಮಾಡಿದ್ದರು. ಅದರಲ್ಲಿ ಈಗಾಗಲೇ 220 ಎಕರೆ ಜಮೀನನ್ನು ಕಳೆದುಕೊಂಡಿದ್ದಾರೆ. ಇನ್ನುಳಿದ 160 ಎಕರೆ ಭೂಮಿಯನ್ನು ತಮ್ಮ ಆರು ಮಕ್ಕಳಿಗೆ ಲಕ್ಕಿ ವರ್ಗಾವಣೆ ಮಾಡಿದ್ದಾರೆ. ಆದರೆ 1991ರ‌ ನಂತರ ಬೇರೆ ಬೇರೆ ಡೀಲರ್ಸ್ ಗಳಿಗೆ ಮಾರಾಟ‌ ಮಾಡುತ್ತಾರೆ. ಅಲ್ಲಿಂದ ಕಾನೂನು ಸಮಸ್ಯೆ ಶುರುವಾಗಿದೆ ಎನ್ನಲಾಗಿದೆ. ಇನ್ನು ಲಕ್ಕಿ ಅವರಿಗೆ ಅನಾರೋಗ್ಯ ಕಾಡುವುದಕ್ಕೆ ಶುರುವಾದ ಮೇಲೆ ಮಾಫಿಯಾ ಗ್ಯಾಂಗ್, ಜಮೀನಿನ ದಾಖಲೆಗಳನ್ನು ತಿರುಚಿದ್ದಾರೆ ಎನ್ನಲಾಗುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...