ಮುಂಬೈ.ಜುಲೈ.29: ಬಾಲಿವುಡ್‌ನ ದಂತಕಥೆ ದೇವ್ ಆನಂದ್ ಹಾಗೂ ಹಿರಿಯ ನಟಿ ಕಲ್ಪನಾ ಕಾರ್ತಿಕ್ ದಂಪತಿಯ ಏಕೈಕ ಪುತ್ರ, ನಟ-ನಿರ್ಮಾಪಕ ಸುನೀಲ್ ಆನಂದ್ (70) ಅವರು ಲಂಡನ್‌ನಲ್ಲಿ ವಿಧಿವಶರಾಗಿದ್ದಾರೆ. ಜುಲೈ 26 ರಂದು ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸುನೀಲ್ ಆನಂದ್ ಅವರ ನಿಧನದ ಸುದ್ದಿಯನ್ನು ಅವರ ಸಹೋದರಿಯ ಮಗಳು ಗೀನಾ ನಾರಂಗ್ ಅಧಿಕೃತ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಗಲಿದ ಚೇತನಕ್ಕೆ ಸಂತಾಪ ಸೂಚಿಸಿ, ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಎಲ್ಲ ಅಭಿಮಾನಿಗಳು ಹಾಗೂ ಬಂಧುಮಿತ್ರರಿಗೆ ಕುಟುಂಬವು ಧನ್ಯವಾದ ಸಲ್ಲಿಸಿದೆ. ಜೊತೆಗೆ, ಈ ದುಃಖದ ಸಂದರ್ಭದಲ್ಲಿ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದೆ.
ಸುನೀಲ್ ಆನಂದ್ 1956ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ನಲ್ಲಿ ಜನಿಸಿದ್ದರು. ಅವರ ಪೋಷಕರು ಪ್ರಸಿದ್ಧ ಕಾರ್ಲೋವಿ ವೇರಿ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದಾಗ ಸುನೀಲ್ ಅವರ ಜನನವಾಗಿತ್ತು. ವಿದೇಶದಲ್ಲೇ ಪ್ರಾಥಮಿಕ ಜೀವನ ಕಳೆದ ಇವರು, ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಅಮೆರಿಕನ್ ವಿಶ್ವವಿದ್ಯಾಲಯದಿಂದ ‘ಬಿಸಿನೆಸ್ ಅಡ್ಮಿನಿಸ್ಟ್ರೇಷನ್’ ವಿಷಯದಲ್ಲಿ ಉನ್ನತ ಪದವಿ ಪಡೆದಿದ್ದರು.
ಉನ್ನತ ಶಿಕ್ಷಣ ಪಡೆದಿದ್ದರೂ ಸುನೀಲ್ ಅವರು ಅಂತಿಮವಾಗಿ ತಮ್ಮ ಕುಟುಂಬದ ಸಿನಿಮಾ ಪರಂಪರೆಯನ್ನೇ ಆಯ್ಕೆ ಮಾಡಿಕೊಂಡರು. ಭಾರತೀಯ ಚಿತ್ರರಂಗಕ್ಕೆ ಆನಂದ್ ಕುಟುಂಬದ ಕೊಡುಗೆ ಅಪಾರ. ತಂದೆ ದೇವ್ ಆನಂದ್ ಮಾತ್ರವಲ್ಲದೆ, ಖ್ಯಾತ ನಿರ್ದೇಶಕರಾದ ಚೇತನ್ ಆನಂದ್ ಮತ್ತು ವಿಜಯ್ ಆನಂದ್ ಇವರ ಚಿಕ್ಕಪ್ಪಂದಿರಾಗಿದ್ದರೆ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಶೇಖರ್ ಕಪೂರ್ ಇವರ ಸೋದರಸಂಬಂಧಿಯಾಗಿದ್ದಾರೆ. ಸುನೀಲ್ ಆನಂದ್ ಅವರ ನಿಧನಕ್ಕೆ ಬಾಲಿವುಡ್‌ನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











