Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾರಿನ ವಿಂಡ್‌ಶೀಲ್ಡ್‌ನ ಕಪ್ಪು ಚುಕ್ಕೆಗಳು: ಅಲಂಕಾರವಲ್ಲ, ಇಲ್ಲಿದೆ ವೈಶಿಷ್ಟ್ಯ

---Advertisement---

ಕಾರಿನ ಮುಂಭಾಗದ ಗಾಜು, ಅಂದರೆ ವಿಂಡ್‌ಶೀಲ್ಡ್‌ನ ಅಂಚುಗಳಲ್ಲಿ ಕಾಣಿಸುವ ಸಣ್ಣ ಕಪ್ಪು ಚುಕ್ಕೆಗಳನ್ನು ಬಹುತೇಕರು ಕೇವಲ ವಿನ್ಯಾಸದ ಭಾಗವೆಂದು ಭಾವಿಸುತ್ತಾರೆ. ಆದರೆ ಈ ಚುಕ್ಕೆಗಳ ಹಿಂದೆ ಮಹತ್ವದ ತಾಂತ್ರಿಕ ಕಾರಣವಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯೊಂದು ಇದಕ್ಕೆ ಹೊಸ ಚರ್ಚೆಗೆ ಕಾರಣವಾಗಿದೆ.

ಒಬ್ಬ ಮಹಿಳೆ ಹಂಚಿಕೊಂಡ ಅನುಭವದಲ್ಲಿ, ತೀವ್ರ ಬಿಸಿಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲಾರಿಯ ಟೈರ್ ತುಂಡೊಂದು ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದ ಪರಿಣಾಮ ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟರೂ ಅದು ಪುಡಿಯಾಗಿ ಒಳಗಿದ್ದವರ ಮೇಲೆ ಬೀಳಲಿಲ್ಲ ಎಂದು ವಿವರಿಸಿದ್ದಾರೆ. ಈ ರಕ್ಷಣೆಗೂ ವಿಂಡ್‌ಶೀಲ್ಡ್‌ನ ಅಂಚಿನಲ್ಲಿರುವ ಕಪ್ಪು ಚುಕ್ಕೆಗಳೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಇದನ್ನು ಅನುಮಾನಿಸಿದರೂ, ತಾಂತ್ರಿಕವಾಗಿ ಈ ಚುಕ್ಕೆಗಳ ಮಹತ್ವ ಸ್ಪಷ್ಟವಾಗಿದೆ.

ವಿಂಡ್‌ಶೀಲ್ಡ್‌ನ ಅಂಚಿನಲ್ಲಿ ಕಾಣುವ ಕಪ್ಪು ಪಟ್ಟಿಯನ್ನು ‘ಫ್ರಿಟ್ ಬ್ಯಾಂಡ್’ ಎಂದು ಕರೆಯಲಾಗುತ್ತದೆ. ಇದು ಗಾಜಿನ ತಯಾರಿಕೆಯಲ್ಲಿ ಬಳಸುವ ವಿಶೇಷ ಸೆರಾಮಿಕ್ ಪದಾರ್ಥವಾಗಿದ್ದು, ಗಾಜನ್ನು ಕಾರಿನ ಫ್ರೇಮ್‌ಗೆ ಬಲವಾಗಿ ಅಂಟಿಸಲು ಸಹಕಾರಿಯಾಗಿದೆ. ಜೊತೆಗೆ, ಗಾಜನ್ನು ಅಂಟಿಸುವ ಅಂಟು ಸೂರ್ಯನ ನೇರ ಕಿರಣಗಳಿಂದ ಹಾನಿಯಾಗದಂತೆ ಇದು ರಕ್ಷಿಸುತ್ತದೆ.ಇದಲ್ಲದೆ, ಆ ಕಪ್ಪು ಚುಕ್ಕೆಗಳು ಗಾಜಿನ ಉಷ್ಣತೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಪ್ಪು ಭಾಗವು ಬೇಗನೆ ಬಿಸಿ ಹಿಡಿಯುವಾಗ, ಪಾರದರ್ಶಕ ಭಾಗ ತಡವಾಗಿ ಬಿಸಿ ಹಿಡಿಯುತ್ತದೆ.

ಈ ಉಷ್ಣ ವ್ಯತ್ಯಾಸದಿಂದ ಗಾಜು ಬಿರುಕು ಬಿಟ್ಟೇಬಿಡುವ ಸಾಧ್ಯತೆ ಇರುತ್ತದೆ. ಆದರೆ ಚುಕ್ಕೆಗಳ ವಿನ್ಯಾಸ ಶಾಖವನ್ನು ಸಮವಾಗಿ ಹಂಚಿ, ಗಾಜಿನ ಬಲವನ್ನು ಕಾಪಾಡುತ್ತದೆ.ಹೀಗಾಗಿ, ವಿಂಡ್‌ಶೀಲ್ಡ್‌ನಲ್ಲಿ ಕಾಣಿಸುವ ಈ ಸಣ್ಣ ಕಪ್ಪು ಚುಕ್ಕೆಗಳು ಕೇವಲ ಅಲಂಕಾರವಲ್ಲ; ಅವು ವಾಹನದ ಸುರಕ್ಷತೆಯಲ್ಲಿ ಮಹತ್ವದ ಪಾತ್ರವಹಿಸುವ ವೈಜ್ಞಾನಿಕ ವಿನ್ಯಾಸವೆಂಬುದು ಸ್ಪಷ್ಟವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now