ದಾವಣಗೆರೆ : ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಬಿಜೆಪಿಯೇನೋ ಮೊದಲೇ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಇನ್ನು ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ. ಆದರೂ ನಾವೇ ಅಭ್ಯರ್ಥಿ ಅಂತ ಕಾಂಗ್ರೆಸ್ ನಲ್ಲಿ ನಾಮಪತ್ರಗಳು ಸಲ್ಲಿಕೆ ಆಗಿವೆ. ಅದರಲ್ಲೂ ಜಿಲ್ಲೆಯಲ್ಲಿಯೇ ಶಕ್ತಿಶಾಲಿಯಾಗಿರುವ ಶಾಮನೂರು ಶಿವಶಂಕರಪ್ಪ ಕುಟುಂಬದ ಕುಡಿ ಸಮರ್ಥ್ ಎಂಟ್ರಿಯಾಗಿದ್ದು, ಅವರ ಎದುರು ನೀವೂ ಗೆಲ್ತೀರಾ ಎಂದು ಬಿಜೆಪಿ ನಾಯಕನನ್ನ ಕೇಳಿದ್ದಕ್ಕೆ ಅಭ್ಯರ್ಥಿ ಶ್ರೀನಿವಾಸ್ ಟಿ ದಾಸ ಕರಿಯಪ್ಪ ಹೇಳಿದ್ದು ಹೀಗೆ.
ಬಿ ಫಾರಂ ಬಂದಿದೆ. ಈಗ ಸಾಂಕೇತಿಕವಾಗಿ ಐದು ಜನ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೀವಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರೇ ತೀರ್ಮಾನ ಮಾಡಿದ್ದಾರೆ ಈ ಬಾರಿ ಬಿಜೆಪಿಯನ್ನ ಗೆಲ್ಲಿಸಬೇಕು ಅಂತ ಹೇಳಿ. ಇದರಲ್ಲಿ ಯಾವುದೇ ಉರುಳಿಲ್ಲ ಗೆದ್ದೇ ಗೆಲ್ಲುವ ನಂಬಿಕೆ ಇದೆ. ನಮ್ಮಲ್ಲಿ ಯಾವ ಗುದ್ದಾಟವೂ ಇಲ್ಲ, ಬಣವೂ ಇಲ್ಲ, ಎಲ್ಲರೂ ಒಂದೇ ಎಂಬಂತೆ ಇದ್ದೀವಿ. ಗೆದ್ದೇ ಗೆಲ್ಲುತ್ತೀನಿ. ಕಾಂಗ್ರೆಸ್ ವಿರುದ್ಧ ಗೆಲ್ಲುತ್ತೀನಿ. ಏನು ಮೂರು ವರ್ಷಗಳಿಂದ ಕಾಂಗ್ರೆಸ್ ದುರಾಡಳಿತ ನಡೆಸಿದೆ. ಅದರ ವಿರುದ್ಧ ಗೆಲ್ಲುತ್ತೀನಿ ಎಂಬ ಮಾತನ್ನ ಹೇಳಿದ್ದಾರೆ.
ಇವತ್ತು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕೊಟ್ಟಿದ್ದಾರೆ. ಶಾಮನೂರು ಫ್ಯಾಮಿಲಿ ಏನು ಹೇಳ್ತಿದೆ, ನಾವೇ ಗೆಲ್ಲೋರು, ನಮ್ಮನ್ನ ಬಿಟ್ಟರೆ ಯಾರೂ ಇಲ್ಕ,,, ನೀಮ್ಮಿಂದ ಗೆಲ್ಲೋಕೆ ಆಗಲ್ಲ ಅನ್ನೋ ಮನಸ್ಥಿತಿ ಬಂದಿದೆ. ಕೋಟಿಗಟ್ಟಲೆ ದುಡ್ಡಿದೆ, ದುಡ್ಡು ಚೆಲ್ಲಿ ಗೆದ್ದು ಬರ್ತೀವಿ ಅಂದುಕೊಂಡಿದ್ದಾರೆ. ಈ ಬಾರಿ ಆ ಆಟ ನಡೆಯಲ್ಲ. ಪಾಪ ಮುಸ್ಲಿಂರು ಅವತ್ತಿನಿಂದ ಗೆಲ್ಲಿಸಿಕೊಂಡು ಬಂದಿದ್ದಾರೆ. ಇಂದಲ್ಲ ನಾಳೆ ಒಳ್ಳೆಯದಾಗುತ್ತೆ ಅಂಥ ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












