Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಪರ್ಧಿಗಳ ಮುಂದೆ ಬಿಗ್ ಬಾಸ್ ಟ್ರೋಫಿ : 6 ಜನರಲ್ಲಿ ಯಾರಿಗೆ ಹಣದ ಅಗತ್ಯ..? ಯಾರೂ ವಿನ್ ಆಗಬೇಕಿದೆ..?

---Advertisement---

ಬಿಗ್ ಬಾಸ್ ಫಿನಾಲೆ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ನಾಲ್ಕು ದಿನವಷ್ಟೇ ಬಾಕಿ. ಭಾನುವಾರ ರಾತ್ರಿ ವಿನ್ನರ್ ಯಾರೆಂದು ಇಡೀ ರಾಜ್ಯಕ್ಕೆ ಗೊತ್ತಾಗುತ್ತದೆ. ಟ್ರೋಫಿ ಯಾರ ಪಾಲಾಗಲಿದೆ ಎಂಬ ಎಕ್ಸೈಟ್ಮೆಂಟ್ ವೀಕ್ಷಕರಿಗೂ ಇದೆ. ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳಿದ್ದಾರೆ. ಮೋಕ್ಷಿತಾ, ಮಂಜಣ್ಣ, ತ್ರಿವಿಕ್ರಂ, ಭವ್ಯಾ, ರಜತ್ ಹಾಗೂ ಹನುಮಂತು. ಆರು ಜನರಲ್ಲೂ ಟ್ರೋಫಿ ನಮ್ಮದಾಗಬಹುದಾ ಎಂಬ ಲೆಕ್ಕಚಾರದಲ್ಲಿಯೇ ಇದ್ದಾರೆ. ಇದೀಗ ಬಿಗ್ ಬಾಸ್ ಪ್ರೋಮೋ ಒಂದನ್ನ ರಿಲೀಸ್ ಮಾಡಿದ್ದು, ಟ್ರೋಫಿ ಮುಂದಿಟ್ಟು ಮನದಾಳದ ಮಾತುಗಳನ್ನ ಹೇಳಲು ತಿಳಿಸಿದೆ.

ಹನುಮಂತು ಮಾತನಾಡಿ, ಅವ್ವ ತಾಯಿ ಗರುಡವ್ವ ಎಂದು ಮುಂದೆ ತನಗೆ ಈ ಟ್ರೋಫಿ ಅಗತ್ಯ ಎಷ್ಟಿದೆ ಎಂಬುದನ್ನು ತಿಳಿಸಿದ್ದಾರೆ. ಅದನ್ನ ಎಪಿಸೋಡಿನಲ್ಲಿಯೇ ನೋಡಬೇಕಾಗಿದೆ. ಇದೇ ವೇಳೆ ತ್ರಿವಿಕ್ರಂ ಕೂಎ ಬೇಡಿಕೊಂಡಿದ್ದು, ನಿನ್ನ ರೆಕ್ಕೆಯನ್ನ ನನಗೆ ಕೊಡು. ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಬೇಕೆಂಬ ಆಸೆ ಇದೆ ಎಂದಿದ್ದಾರೆ.

ಇದೆ ವೇಳೆ ಭವ್ಯಾ ಅವರು ಬಿಗ್ ಬಾಸ್ ಟೈಟಲ್ ಜೊತೆಗೆ ನನಗೆ ಬರುವ ದುಡ್ಡಿನಿಂದಲೂ ಉಪಯೋಗವಿದೆ. ನನ್ನ ಡ್ಯಾಡಿ ವಾಶ್ ರೂಮಿನಲ್ಲಿ ಬಿದ್ದು ಬಿಟ್ಟಿದ್ದರು. ಅವರ ವೋಕಲ್ ಬಾಕ್ಸ್ ಗೆ ಪೆಟ್ಟು ಬಿದ್ದಿದೆ. ಅವರ ಧ್ವನಿಯನ್ನು ಸರಿ ಮಾಡಿಸಲು ಆಗಲಿಲ್ಲ ಎಂಬ ಕೊರಗು ಇದೆ. ಅಂದು ನನ್ನ ಬಳಿ ಹಣ ಇದ್ದಿದ್ದರೆ ಸರಿ ಮಾಡಿಸ್ತ ಇದ್ದೆ ಎಂದು ಕಣ್ಣೀರು ಹಾಕಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಆರು ಜನರಿಗೂ ಗೆಲುವಿನ ಅಗತ್ಯ ತುಂಬಾ ಇದೆ. ಹಣದ ಅಗತ್ಯವೂ ಇದೆ. ಹೀಗಾಗಿ ಗೆಲುವು ಯಾರಿಗೆ ಸಿಗಲಿದೆ, ಜನ ಯಾರಿಗೆ ವೋಟ್ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment