Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದೇ ಬಿಟ್ಟರು ನಮ್ರತಾ..!

---Advertisement---

ಇವತ್ತು ಟಿಕೆಟ್ ಟು ಫಿನಾಲೆ ಟಾಸ್ಕ್ ಕಡೆಯ ದಿನವಾಗಿದೆ. ಕಡೆಯ ಟಾಸ್ಕ್ ನಲ್ಲಿ ತುಕಾಲಿಗೆ ಅವಕಾಶ ನೀಡಲಾಗಿತ್ತು. ಬಾಕ್ಸ್ ಗಳನ್ನು ಕಡ್ಡಿಯಲ್ಲಿ ಬ್ಯಾಲೆನ್ಸ್ ಮಾಡಿ, ಬಾಕ್ಸ್ ಒಳಗಿಂದ ತಂದು ಮೇಲೆ ನೇತಾಕಬೇಕಿತ್ತು. ಇದರಲ್ಲಿ ವಿನಯ್, ವರ್ತೂರು, ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ತುಕಾಲಿ. ಆದರೆ ಪ್ರತಾಪ್ ಗೆ ವಿಶೇಷ ಅಧಿಕಾರ ಸಿಕ್ಕಾಗ ಸಂಗೀತಾ ಅವರನ್ನು ತೆಗೆದಿದ್ದರು. ಯಾಕಂದ್ರೆ ಅಂಕ ಹತ್ತಿರವಿದೆ. ಈ ಆಟದಲ್ಲಿ ಗೆದ್ದರೆ ಸಂಗೀತಾ ಮುಂದೆ ಬಿಡುತ್ತಾರೆ ಅಂತ.

 

ಟಾಸ್ಕ್ ಶುರು ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಉಳಿದ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಗೆಲ್ಲುವ ಸದಸ್ಯನನ್ನು ಗುರುತಿಸಿದರೆ ಅವರಿಗೆ 40 ಮಾರ್ಕ್ಸ್ ಸಿಗುತ್ತದೆ ಎಂದು ಘೋಷಣೆ ಮಾಡಿತ್ತು. ಅದರಂತೆ ತನಿಷಾ, ಕಾರ್ತಿಕ್, ನಮ್ರತಾ ವಿನಯ್, ಸಂಗೀತಾ ಹೆಸರನ್ನು ಗುರುತಿಸಿದ್ದರು. ಆದರೆ ಸಂಗೀತಾ ಅವರು ಪ್ರತಾಪ್ ಹೆಸರನ್ನೇ ಬರೆದಿದ್ದರು. ಹೀಗಾಗಿ 40 ಅಂಕಗಳು ಸಿಕ್ಕಿದೆ.

 

ಫಿನಾಲೆ ಟು ಟಾಸ್ಕ್ ನಲ್ಲಿ ತುಕಾಲಿ 140, ತನಿಷಾ- 140, ಕಾರ್ತಿಕ್ – 170, ವಿನಯ್ – 180, ಸಂತೋಷ್ – 200, ನಮ್ರತಾ – 210, ಸಂಗೀತಾ – 300, ಪ್ರತಾಪ್ – 420 ಅಂಕಗಳು ಬಂದಿದೆ. ಈ ಅಂಕಗಳ ಆಧಾರದ ಮೇಲೆ ಮೂರು ಜನರನ್ನು ಬಿಗ್ ಬಾಸ್ ಆಯ್ಕೆ ಮಾಡಿದೆ. ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದ ಎಲಿಮಿನೇಷನ್ ನಿಂದ ಕೂಡ ಪಾರಾಗುತ್ತಾರೆ. ಇನ್ನೊಂದು ವಾರ ಕಳೆದರೆ ಫಿನಾಲೆಗೆ ಕಾಲಿಡಲಿದ್ದಾರೆ. ಟಿಕೆಟ್ ಟು ಫಿನಾಲೆಯಲ್ಲಿ ಸಂಗೀತಾ, ಪ್ರತಾಪ್ ಜೊತೆಗೆ ನಮ್ರತಾ ಕೂಡ ಟಿಕೆಟ್ ಪಡೆದಿದ್ದಾರೆ. ಇದು ನಮ್ರತಾಗೆನೇ ನಂಬುವುದಕ್ಕೆ ಆಗಲಿಲ್ಲ. ಮನೆಯಲ್ಲಿ ಉಳಿದವರೆಲ್ಲಾ ಶುಭ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...