Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನ ಪ್ರಿಯರಿಗೆ ಬಿಗ್ ಶಾಕ್: ಮಾರುಕಟ್ಟೆಯಲ್ಲಿ ದಿಢೀರ್ ರೆಕ್ಕೆ ಬಿಚ್ಚಿ ಹಾರಿದ ಬಂಗಾರದ ಬೆಲೆ! ಇಂದಿನ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ ನೋಡಿ

---Advertisement---

ಸುದ್ದಿಒನ್,ಬೆಂಗಳೂರು,ಮೇ.19:ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಹಾದಿಯಲ್ಲಿದ್ದು, ಆಭರಣ ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಗ್ರಾಹಕರ ಈ ಸಣ್ಣ ಅವಧಿಯ ಸಂತಸಕ್ಕೆ ಬ್ರೇಕ್ ಬಿದ್ದಿದ್ದು, ಕೇವಲ ಮೂರೇ ದಿನಗಳಲ್ಲಿ ಹಳದಿ ಲೋಹದ ಬೆಲೆ ಮತ್ತೆ ಗಗನಕ್ಕೇರಿದೆ.

ಮಂಗಳವಾರ (ಮೇ 19, 2026) ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಆಭರಣ ಚಿನ್ನ (22 ಕ್ಯಾರೆಟ್) ಮತ್ತು ಅಪರಂಜಿ ಚಿನ್ನ (24 ಕ್ಯಾರೆಟ್) ಎರಡರ ಬೆಲೆಯೂ ಗ್ರಾಹಕರಿಗೆ ಶಾಕ್ ನೀಡುವಂತೆ ಭಾರಿ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಏರುಪೇರುಗಳು ಭಾರತೀಯ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದ್ದು, ಇಂದಿನ ತಾಜಾ ಚಿನ್ನ ಮತ್ತು ಬೆಳ್ಳಿ ದರಗಳ ಸಂಪೂರ್ಣ ವಿವರ ಇಲ್ಲಿದೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಗ್ರಾಂ ಚಿನ್ನ ಮತ್ತು ಬೆಳ್ಳಿಯ ಇಂದಿನ ದರ ಹೀಗಿದೆ:

24 ಕ್ಯಾರೆಟ್ ಶುದ್ಧ ಚಿನ್ನ (1 ಗ್ರಾಂ): ₹15,704

22 ಕ್ಯಾರೆಟ್ ಆಭರಣ ಚಿನ್ನ (1 ಗ್ರಾಂ): ₹14,395

18 ಕ್ಯಾರೆಟ್ ಚಿನ್ನ (1 ಗ್ರಾಂ): ₹11,778

ಬೆಳ್ಳಿ ದರ (1 ಗ್ರಾಂ): ₹285

ವಿವಿಧ ನಗರಗಳಲ್ಲಿ ಇಂದಿನ 10 ಗ್ರಾಂ ಅಪರಂಜಿ ಚಿನ್ನದ ದರಗಳು ಈ ಕೆಳಗಿನಂತಿವೆ:

ನಗರದ ಹೆಸರು 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ)
ಬೆಂಗಳೂರು ₹1,57,040
ಮುಂಬೈ ₹1,57,040
ನಾಗ್ಪುರ ₹1,57,040
ಕೋಲ್ಕತ್ತಾ ₹1,57,040
ಪಾಟ್ನಾ ₹1,57,090
ಸೂರತ್‌ ₹1,57,090
ಚಂಡೀಗಢ ₹1,57,190
ಲಕ್ನೋ ₹1,57,190
ಚೆನ್ನೈ ₹1,62,220

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now