Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೋವಿ ಸಮಾಜ ಅತ್ಯಂತ ಸ್ವಾಭಿಮಾ‌ನಿ ಸಮಾಜ : ಡಿ. ಸುಧಾಕರ್

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ಭೋವಿ ಸಮಾಜ‌ ಅತ್ಯಂತ ಸ್ವಾವಲಂಬಿ‌ ಸಮಾಜ.‌ ಇಂತಹ ಸಮಾಜವನ್ನು ಪ್ರಗತಿಪಥದತ್ತ ತೆಗೆದುಕೊಂಡು‌ ಹೋಗುತ್ತಿರುವ ಭೋವಿ ಮಹಾ‌ಸಂಸ್ಥಾನಕ್ಕೆ ಅಗತ್ಯ ನೆರವು ನೀಡುವುದಕ್ಕೆ ತಾವು ಸದಾ ಸಿದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.‌ಸುಧಾಕರ್ ಅವರು ಭರವಸೆ ನೀಡಿದ್ದಾರೆ.

ದಾವಣಗೆರೆ ವಿಶ್ವ ವಿದ್ಯಾನಿಲಯ ವು ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಅವರಿಗೆ ಇಲ್ಲಿನ ಭೋವಿ ಗುರುಪೀಠದಲ್ಲಿ ಫೆ.೧೩ ರಂದು ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಂ. ರಾಮಪ್ಪ‌ಅವರು ನನಗೆ ತುಂಬಾ ಆತ್ಮೀಯರು. ಅವರೀಗ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿರುವುದು ತುಂಬಾ ಸಂತೋಷ ತಂದಿದೆ. ಅವರು ತುಂಬಾ ಸರಳಜೀವಿ. ಹಾಗೆಯೇ ಸ್ವಾವಲಂಬಿ. ಅವರು‌ ಮಾತ್ರವಲ್ಲ, ಭೋವಿ ಸಮಾಜವೇ ಅತ್ಯಂತ ಸ್ವಾವಲಂಬಿ ಸಮಾಜ, ಉದಾತ್ತರು, ಸ್ನೇಹಜೀವಿಗಳು. ಈ‌ ಸಮಾಜವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುತ್ತಿರುವ ಭೋವಿ ಮಹಾ‌ಸಂಸ್ಥಾನಕ್ಕೆ ಅಗತ್ಯ‌ನೆರವು ನೀಡಲಾಗುವುದು ಎಂದರು.
ನಾನು‌ ಮಠ ಮಾನ್ಯಗಳಿಗೆ ಹೋಗುವುದಿಲ್ಲ, ಆದರೆ, ಭೋವಿಮಹಾಸಂಸ್ಥಾನದ‌ ಗುರುಗಳ‌ಸರಳ ಸಜ್ಜನಿಕೆ, ವಿಚಾರ ನನನ್ನು‌ಅಕರ್ಷಣೆ ಹುಟ್ಟಿಸಿದೆ.ಆ ಕಾರಣಕ್ಕೆ‌ ನಾನು‌ ಮಠದ ಅಭಿಮಾನಿಯಾ ಗಿದ್ದೇನೆ.‌ ನನಗೀಗ ಅಧಿಕಾರವಿದೆ. ಮಠಕ್ಕೆ ನನ್ನಿಂದಾದ ಸಹಾಯ‌ಮಾಡುವೆ ಎಂದರು.

ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ‌ ಮಾತನಾಡಿ, ಭೋವಿ ಗುರುಪೀಠ ಸಮಾಜದಲ್ಲಿ ಪ್ರಭಾವಿ ಮಠವಾಗಿ ಗುರುತಿಸಿದೆ. ಅದಕ್ಕೆ‌ ಕಾರಣರು ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು.‌ ಈ‌ ಸಮಾಜಕ್ಮೆ ನಿಗಮದಿಂದ ಏನೇನು ಸೌಲಭ್ಯಗಳಿವೋ‌ ಅವುಗಳನ್ನು ತಲುಪಿಸಲು ಎಂ.ರಾಮಪ್ಪ ಅವರು ಶ್ರಮಿಸಲಿ ಎಂದರು.

ಚಳ್ಳಕೆರೆ ಶಾಸಕ ಟಿ.ರಘು ಮೂರ್ತಿ ಮಾತನಾಡಿ, ಎಂ.‌ರಾಮಪ್ಪ‌ನನಗೆ ಅತ್ಮೀಯರು. ಅವರು ಇವತ್ತಿನ‌ ಅಭಿನಂದನೆಗೆ ಅರ್ಹರು. ೨೦೦೮ ರಲ್ಲಿ ನನಗೆ ಅವರು ಪರಿಚಯವಾದರು. ಅಂದಿನಿಂದ ಇಂದಿನವೆರಗೂ ತುಂಬಾ ಅತ್ಮೀಯರಾ ಗಿದ್ದಾರೆ. ಎಲ್ಲರಿಗೂ ಎಲ್ಲಾ ‌ಅವಕಾಶ ಸಿಗಲ್ಲ. ಕೆಲವರಿಗೆ ಕೆಲವು ಸಿಗುತ್ತವೆ. ಇವತ್ತು‌ ಅವರು‌ ಬರೀ‌‌ ಅಧ್ಯಕ್ಷರಲ್ಲ, ಡಾಕ್ಟರ್ ಆಗಿದ್ದಾರೆ.‌ಅವರ ಸಮಾಜ‌ ಸೇವೆಗೆ ಈ‌ ಪದವಿ‌ ಸಿಕ್ಕಿದೆ ಎಂದರು.

ಅಭಿನಂದನೆ‌ ಸ್ವೀಕರಿಸಿದ ರಾಜ್ಯ ಭೋವಿ‌ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ, ಮಾತನಾಡಿ, ನನ್ನದೇ ಅಭಿನಂದನೆ ಕಾರ್ಯಕ್ರಮ, ನಾನೇ ಮಾತನಾಡುವುದು ಮುಜುಗರ. ನಾನು ಕೆಳ ಹಂತದಿಂದ ಬಂದವನಾಗಿದ್ದರಿಂದ‌ ನನ್ನ ಜನರ ಸಮಸ್ಯೆ ನನಗೆ ಗೊತ್ತಿದೆ. ನಾನು‌ ನಡೆದು ಬಂದ‌ ದಾರಿಯನ್ನು ಕಂಡಾಗ, ನನಗೆ ಸಂತೃಪ್ತಿಯಿದೆ. ಎಷ್ಟೇ ಇದ್ದರೂ ಕೂಡ ಮನುಷ್ಯನಿಗೆ ತೃಪ್ತಿ ಇಲ್ಲ, ಎನ್ನುವ ಹಾಗೆ ಒಂದು‌ ಪಡೆದರೆ ಇನ್ನೊಂದು ಆಗುತ್ತಾ ಬಂದಿದೆ.‌ ಯಾಕೆಂದರೆ ನಾನು‌‌ ಭೋವಿ‌ ನಿಗಮ ಅಧ್ಯಕ್ಷ ನಾಗುವ ಕನಸು‌ ಇರಲಿಲ್ಲ, ಆದರೆ ಈಗ‌ ಅವಕಾಶ ಸಿಕ್ಕಿದೆ.‌ ಇದನ್ನು ಪ್ರಾಮಾಣಿಕವಾಗಿ‌ ನಿಭಾಯಿಸುವೆ ಎಂದರು.

ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಸಮಾಜಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಹೊಂದಿರುವ ವ್ಯಕ್ತಿ, ನಿಗಮದ ಅಧ್ಯಕ್ಷರಾಗ ಬೇಕೆನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ‌ ಬಳಿ‌ ಹೋಗಿ‌ ನಾವು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ನೇಮಕ‌ ಮಾಡಲಾಯಿತು. ರಾಮಪ್ಪನವರು ಸದಾ ಹಸ್ಮನುಖಿ‌. ಯಾವತ್ತಿಗೂ ಯಾರಿಗೂ ಕೆಟ್ಟದ್ದನ್ನು‌ ಮಾಡದ ಮನಸ್ಸು. ಅವರಿಗೆ ಸಮಾಜದ ಜನರ ಕಷ್ಟ ಗೊತ್ತಿದೆ. ನಿಗಮವನ್ನು‌ ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಾರೆನ್ನುವ ವಿಶ್ವಾಸವಿದೆ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಭೋವಿ ಮಹಾ‌ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಜೀವನ ಒಮೊಮ್ಮೆ ಪರೀಕ್ಷೆಯ ಕಾಲದಲ್ಲಿರುತ್ತದೆ. ಆ ಸಮಯದಲ್ಲಿ ನಮ್ಮೊಳಗಿನ ಪ್ರಕ್ರಿಯೆಗಳು ಕಬ್ಬಿಣದಂತೆ ಹೊರಬರಲು ಸಾಧ್ಯ. ಕಬ್ಬಿಣ ಅಗೋದು ಅಂದ್ರೆ ಯೋಗ್ಯತೆ, ಅರ್ಹತೆಯನ್ನು ಸಂಪಾದಿಸುವುದು ಅಂತ. ಅಂತಹ‌‌ ಕಾಲದಲ್ಲಿ ಅರ್ಹತೆ ಇದ್ದರೂ ರಾಮಪ್ಪನವರಿಗೆ ಅದೃಷ್ಟ ಬಂದಿರಲಿಲ್ಲ.‌ ಈಗ ಅದೃಷ್ಟ ಬಂದಿದೆ. ಅದೃಷ್ಟ ಎನ್ನುವುದು ಸ್ವಲ್ಪ‌ತಡವಾಗಿ ಬಂತು ಎಂದರು.

ಅಧಿಕಾರವಿದ್ದಾಗ ಜನರಿಗೆ ಏನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ.ಈ ನಿಟ್ಟಿನಲ್ಲಿ ರಾಮಪ್ಪ ಅವರ ಇತ್ತೀಚಿನ ಕಾರ್ಯಗಳು ಗಮನಾರ್ಹವಾಗಿವೆ,ಭೋವಿ ​ಅಭಿವೃದ್ಧಿ ನಿಗಮದ ಪೋರ್ಟ್‌ಫೋಲಿಯೋ ಸಿಕ್ಕಿದ್ದು, ಇದನ್ನು ಬಳಸಿಕೊಂಡು ಅವರು ಸಕ್ರಿಯವಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ.ನಿಗಮದ ಜವಾಬ್ದಾರಿ ವಹಿಸಿಕೊಂಡ ಕೇವಲ 4-5 ತಿಂಗಳುಗಳಲ್ಲಿ ಅರ್ಧ ಕರ್ನಾಟಕವನ್ನು ಸುತ್ತಿ ಜನರ ಸಮಸ್ಯೆಗಳನ್ನು ಅರಿತ್ತಿದ್ದಾರೆ.
​ಮುಗ್ಧ ಸಮಾಜವನ್ನು ಪ್ರಬುದ್ಧ ಸಮಾಜವನ್ನಾಗಿ ಪರಿವರ್ತಿಸಲು ಪ್ರತಿಯೊಂದು ಜಿಲ್ಲೆಯ ಆಯ್ದ ಮುಖಂಡರನ್ನು ಕರೆಸಿ ಬೌದ್ಧಿಕ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆಂದರು.

​ಹೋರಾಟದ ಹಿನ್ನೆಲೆ ರಾಮಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನವೇ ಮೈಸೂರಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.ಮೈಸೂರು ಭಾಗದ ಭೂಮಿಯ ಹಕ್ಕುಗಳು ಮತ್ತು ರೈತರ ಸಮಸ್ಯೆಗಳಿಗಾಗಿ ನಿರಂತರ ಹೋರಾಟ ನಡೆಸಿದವರು.ಕೃಷಿ ಮತ್ತು ಸಮಾಜ ಸೇವೆಯ ಜೊತೆಗೆ ಸಾಹಿತ್ಯಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
​ಒಬ್ಬ ವಿದ್ಯಾವಂತ ಮತ್ತು ಪ್ರಜ್ಞಾವಂತ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಸಮಾಜದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ರಾಮಪ್ಪ ಅವರ ಇಂದಿನ ಕಾರ್ಯವೈಖರಿ ಸಾಕ್ಷಿಯಾಗಿದೆಎಂದರು.

ಚಿತ್ರದುರ್ಗ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ. ರವಿಕುಮಾರ್,
ಕರ್ನಾಟಕ‌ ಚಲನ ಚಿತ್ರ ಅಕಾಡೆಮಿ‌ ಸದಸ್ಯ ದೇಶಾದ್ರಿ‌ಹೊಸ್ಮನೆ,
ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ದ್ಯಾಮಣ್ಣ,
ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ,
ಹಾವೇರಿ ರವಿ ಪೂಜಾರಿ, ಬಳ್ಳಾರಿ ರಾಮಾಂಜನೇಯ, ವಿಜಯನಗರ ದೊಡ್ಡರಾಮಣ್ಣ, ದಾವಣಗೆರೆ ಜಯಣ್ಣ, ರುದ್ರಣ್ಣ, ಸೇತುರಾಮ್, ಭೋವಿ ನಿಗಮದ ಎಂ.ಡಿ ಚಂದ್ರ ನಾಯಕ್ ಗೌನಹಳ್ಳಿ ಗೋವಿಂದಪ್ಪ, ಡಿ.ಸಿ.ಮೋಹನ್, ಈ.ಮಂಜುನಾಥ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
………

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...