Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೀಮಸಮುದ್ರದಲ್ಲಿ ಮೈನ್ಸ್ ಲಾರಿಗಳನ್ನು ತಡೆದು ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 20 : ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಹೊಲಗಳಲ್ಲಿ ಓಡಾಡುತ್ತಿದ್ದ ಮೈನ್ಸ್ ಲಾರಿಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು. ದಾರಿ ಇಲ್ಲದೆ ಇದ್ದರೂ ಸಹಾ ದಾರಿ ಮಾಡಿಕೊಂಡು ಹೋಗುತ್ತಿರುವ ಲಾರಿ ಮಾಲಿಕರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

 

ಭೀಮಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹೊಲವೊಂದರಲ್ಲಿ ಈ ಹಿಂದೆ ಅಕ್ರಮವಾಗಿ ನಡೆಸಿದ ಗಣಿಗಾರಿಕೆಯ ಖನಿಜವನ್ನು ಹೊಲವೊಂದರಲ್ಲಿ ಸಂಗ್ರಹ ಮಾಡಲಾಗಿತ್ತು. ಇದನ್ನು ಖಾಸಗಿ ಕಂಪನಿಯೊರ್ವರು ಸರ್ಕಾರದ ಮೂಲಕ ಟೆಂಡರ್ ಪಡೆದ ಅದರ ಸಾಗಾಟಕ್ಕೆ ಗುತ್ತಿಗೆಯನ್ನು ಪಡೆದಿದ್ದರು. ಆದರೆ ಈ ಹೊಲದಿಂದ ಗ್ರಾಮದ ಲಾರಿಗಳು ಹೂರಗಡೆ ಹೋಗಲು ಸರಿಯಾದ ದಾರಿ ಇಲ್ಲ ಈಗ ಇರುವ ದಾರಿ ಅಕ್ಕ-ಪಕ್ಕದಲ್ಲಿನ ರೈತರು ತಮ್ಮ ಹೊಲದಲ್ಲಿ ಸ್ವಲ್ಪ ಭಾಗವನ್ನು ಬಿಟ್ಟುಕೊಟ್ಟು ದಾರಿಯನ್ನು ನಿರ್ಮಾಣ ಮಾಡಿ ತಮ್ಮ ಹೊಲಗಳಿಗೆ ಬೀಜ, ಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದಾರೆ ಈ ದಾರಿಯಲ್ಲಿ ಯಾವುದೇ ಕಾರಣಕ್ಕೂ ಮೈನ್ಸ್ ಲಾರಿಗಳು ಓಡಾಡ ಬಾರದೆಂದು ರಸ್ತೆಯನ್ನು ನಿರ್ಮಾಣ ಮಾಡುವಾಗ ನಿಭಂದನೆಯನ್ನು ಹಾಕಲಾಗಿತ್ತು. ಇಷ್ಠಾದರೂ ಸಹಾ ನಿನ್ನೆ ಬೆಳಿಗ್ಗೆ 4 ಗಂಟೆಗೆ ಲಾರಿಯನ್ನು ತೆಗೆದುಕೊಂಡು ಬಂದು ಅದಿರನ್ನು ಲೋಡ್ ಮಾಡಿ ಇಲ್ಲಿಂದ ಹೋಗುವ ಯತ್ನವನ್ನು ಮಾಡಿದರು ಇದು ನಮಗೆ ಗೊತ್ತಾಗಿ ಲಾರಿಯನ್ನು ಮುಂದೆ ಹೋಗದಂತೆ ತಡೆಹಿಡಿಯಲಾಗಿದೆ ಈ ದಾರಿಯಿಂದ ಗಣಿ ಲಾರಿಗಳು ಓಡಾಡಬಾರದು ಬೇರೆ ಕಡೆಯಿಂದ ಹೋಗಲಿ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

ಇಲ್ಲಿ ಲಾರಿಗಳು ಓಡಾಟದಿಂದಾಗಿ ಸುತ್ತಾ-ಮುತ್ತಲ್ಲಿನ ಜಮೀನುಗಳಲ್ಲಿ ಬೆಳೆ ಬೆಳೆಯದೆ ಹಾಳಾಗಿದೆ ಲಕ್ಷಾಂತರೂಗಳ ಬಂಡವಾಳವನ್ನು ಹಾಕಿ ಈಗ ಬೆಳೆ ಬರುತ್ತದೆ ಎಂದು ಕಾಯುತ್ತಿರುವ ರೈತನಿಗೆ ಗಣಿ ಲಾರಿಗಳ ಓಡಾಟದಿಂದಾಗಿ ಬೆಳೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದೆ, ಇದರ ನಷ್ಠವನ್ನು ಯಾರು ಹೊರುತ್ತಾರೆ ನಮಗೆ ಆದ ನಷ್ಠವನ್ನು ಯಾರೂ ತುಂಬಿ ಕೊಡುತ್ತಾರೆ ಎಂದು ನಮ್ಮ ಅಳಲನ್ನು ತೋಡಿಕೊಂಡರು, ಇದಕ್ಕೂ ಮುನ್ನಾ ಲಾರಿಗಳನ್ನು ಈ ದಾರಿಯಲ್ಲಿ ಓಡಾಡಿಸಬೇಡಿ ಎಂದು ಕೇಳಲು ಹೋದ ರೈತರ ಮೇಲೆ ಲಾರಿಯ ಚಾಲಕರು ದೌರ್ಜನ್ಯ ಮಾಡಿದ್ದಾರೆ ಇವರ ಮೇಲೆ ಲಾರಿಯನ್ನು ಹತ್ತಿಸು ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ದಾರಿಯಲ್ಲಿ ಗಣಿ ಲಾರಿಗಳನ್ನು ಓಡಾಡಲು ಬಿಡಿವುದಿಲ್ಲ ಅವರು ಬೇರೆ ದಾರಿಯನ್ನು ನೋಡಿಕೊಳ್ಳಲಿ ಎಂದು ಗ್ರಾಮಸ್ಥರು ಲಾರಿಗಳನ್ನು ಮುಂದೆ ಬಿಡದೆ ದಾರಿಯಲ್ಲಿ ಅಡ್ಡ ಹಾಕಿ ಲಾರಿಗಳು ಮುಂದೆ ಹೋಗದಂತೆ ದಾರಿಯನ್ನು ತಡೆಯಲಾಗಿದೆ. ಸ್ಥಳದಲ್ಲಿ ಪೋಲೀಸರು ಮೊಕ್ಕಂ ಮಾಡಿದ್ದು ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಮುಂದಾಗಿದ್ದರು. ರಾತ್ರಿ ಪೂರ್ಣವಾಗಿ ಗ್ರಾಮಸ್ಥರು ನಿದ್ದೆ ಮಾಡದೆ ಲಾರಿಗಳನ್ನು ಮುಂದೆ ಬಿಡದೆ ಕಾದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment