ಬೆಂಗಳೂರು: ನಟಿಯರು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ವಿಚಾರವನ್ನು ಸಾಕಷ್ಟು ಸಲ ತಿರಸ್ಕಾರ ಮಾಡುತ್ತಿದ್ದಾರೆ. ಮದುವೆ ಅನ್ನೋದನ್ನ ದೂರವಿಟ್ಟು ಲೈಫ್ ಲೀಡ್ ಮಾಡೋದನ್ನ ನೋಡುತ್ತಾರೆ. ಚಂದ್ರಮುಖಿ ಪ್ರಾಣಸಖಿ ನಟಿ ಭಾವನಾ ರಾಮಣ್ಣ ಕೂಡ ಮದುವೆಯಾಗಿಲ್ಲ. ಅವರ ಮದುವೆ ಬಗ್ಗೆ ಸಾಕಷ್ಟು ಗಾಸಿಪ್ ಕೂಡ ಓಡಾಡಿತ್ತು. ಆದರೆ ಇದೀಗ ನಟಿ ಭಾವನಾ ತಾಯಿಯಾಗುತ್ತಿದ್ದಾರೆ. ಅವಳಿ ಮಕ್ಕಳಿಗೆ ಇನ್ನೇನು ಕೆಲವೇ ತಿಂಗಳಲ್ಲಿ ತಾಯಿಯಾಗುತ್ತಿದ್ದಾರೆ.
ಭಾವನಾಗೆ ಈಗ 40 ವರ್ಷ ವಯಸ್ಸು. ನಟಿ ಹಾಗೂ ಭರತನಾಟ್ಯ ಕಲಾವಿದೆ. ರಾಜಕೀಯದಲ್ಲೂ ಗುರುತಿಸಿಕೊಳ್ಳುತ್ತಾರೆ. ಭಾವನಾ ಇನ್ನೂ ಮದುವೆಯಾಗಿಲ್ಲ. ಆದರೆ ಮಗುವಿನ ತಾಯಿಯಾಗ್ತಿದ್ದಾರೆ. ಆದರೆ ಅವರಿಗೆ ತಾಯಿಯಾಗಬೇಕೆಂಬ ಬಯಕೆ ಇದ್ದಿದ್ದರಿಂದ ಐವಿಎಫ್ ಮೂಲಕ ತಾಯಿಯಾಗ್ತಿದ್ದಾರೆ. ಈಗಾಗಲೇ ಭಾವನಾಗೆ ಆರು ತಿಂಗಳು ತುಂಬಿದೆ. ಇನ್ನು ಮೂರು ತಿಂಗಳಲ್ಲಿ ಭಾವನಾ ಅವಳಿ ಮಕ್ಕಳ ತಾಯಿಯಾಗ್ತಾ ಇದ್ದಾರೆ.
ಈಗ ತಾಯಿಯಾಗ್ತಿರುವ ಬಗ್ಗೆ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿರುವ ಭಾವನಾ, ನನಗೆ ಮಕ್ಕಳ ಜೊತೆಗೆ ಇರಬೇಕೆಂಬ ಬಯಕೆ. ಆದರೆ 20ನೇ ವಯಸ್ಸಿನಲ್ಲಿದ್ದಾಗ ಮಕ್ಕಳ ಬಗ್ಗೆ ಅಷ್ಟು ಆಸಕ್ತಿ ಹೊಂದಿರಲಿಲ್ಲ. 30ನೇ ವಯಸ್ಸಿಗೆ ತಾಯಿಯಾಗುವ ಆಸೆ ಇದ್ದರು ಆ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಈಗ 40ನೇ ವರ್ಷಕ್ಕೆ ಬಂದ ಮೇಲೆ ತಾಯೊಯಾಗಲೇಬೇಕು ಅನ್ನಿಸಿತ್ತು. ಹೀಗಾಗಿ ಮಗುವನ್ನು ಪಡೆಯುತ್ತಿದ್ದೇನೆ. ನನ್ನ ಮಕ್ಕಳಿಗೆ ತಂದೆ ಇರದೇ ಇರಬಹುದು. ಆದರೆ ದಯಾಳು ಪುರುಷರು ನನ್ನ ಮಕ್ಕಳ ಸುತ್ತ ಇರುತ್ತಾರೆ ಎಂದಿದ್ದಾರೆ. ದಯಾಳು ಪುರುಷರು ಎಂದರೆ ಕರುಣೆ ಹಾಗೂ ಸಹಾನುಭೂತಿ ಉಳ್ಳ ಪುರುಷರು ಎಂದರ್ಥ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











