ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಸೆ.09): ಜಲ ಮರುಪೂರಣದ ಮೂಲಕ ಜಲ ಸಂರಕ್ಷಣೆಗಾಗಿ ಕಳೆದ 35 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಅಂರ್ತಜಲ ಹಾಗೂ ಮಳೆನೀರು ಕೊಯ್ಲು ತಜ್ಞ ಚಿತ್ರದುರ್ಗದ ಎನ್.ಜೆ.ದೇವರಾಜರೆಡ್ಡಿರವರಿಗೆ ನವದೆಹಲಿಯ ದ ಬೆಟರ್ ಇಂಡಿಯಾ ಫೌಂಡೇಷನ್ ವತಿಯಿಂದ ಭಾರತ ಜಲಯೋಧ ಪ್ರಶಸ್ತಿ ನೀಡಲಾಗಿದೆ.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ಜಲ ಉಕ್ಕುವಂತೆ ಮಾಡಿರುವ ಇವರ ತಾಂತ್ರಿಕ ಚಾಣಾಕ್ಷತೆಯನ್ನು ಗುರುತಿಸಿ ಭಾರತ ಜಲಯೋಧ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಳೆನೀರು ಕೊಯ್ಲಿಗೆ ಒತ್ತು ನೀಡುತ್ತಿರುವುದು ಇವರ ವಿಶೇಷ.
ಭಾರತ ಜಲಯೋಧ ಪ್ರಶಸ್ತಿಗಾಗಿ ಅನೇಕ ಸ್ಪರ್ಧಾಳುಗಳಲ್ಲಿ ಅತಿ ಉನ್ನತ ಐವರಲ್ಲಿ ಒಬ್ಬರಾಗಿರುವ ಎನ್.ಜೆ.ದೇವರಾಜರೆಡ್ಡಿರವರು ಈ ಪ್ರಶಸ್ತಿ ಅಂರ್ತಜಲ ಹಾಗೂ ಮಳೆನೀರು ಕೊಯ್ಲು ಕ್ಷೇತ್ರದಲ್ಲಿ ಇನ್ನು ಅವಿರತ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿದಂತಾಗಿರುವುದರಿಂದ ನನ್ನ ಪರವಾಗಿ ಆನ್‍ಲೈನ್‍ನಲ್ಲಿ ಮತಚಲಾಯಿಸಿದ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.