Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೂನ್ 14 ರಿಂದ ಭಾರತ ಗೌರವ ಶಿಬಿರ : ಭಾರತೀಯ ವೇದಗಳ ಕುರಿತು ಉಚಿತ ತರಬೇತಿ…!

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 23 : ಜೂನ್ 14 ರಿಂದ 22, 2025 ರವರೆಗೂ ಸಾಕ್ಷಿ ಟ್ರಸ್ಟ್ ಬೆಂಗಳೂರು ಭಾರತ ಗೌರವ ಶಿಬಿರವನ್ನು ಆರೋವೇದ ತೋಟದಲ್ಲಿ ಆಯೋಜಿಸಿದೆ ಎಂದು ಶಿಬಿರ ಸಂಯೋಜಕರಾದ ಬಿಂದು ಮಾಧವ ವಿ.ಜೆ. ತಿಳಿಸಿದ್ದಾರೆ.

ಭಾರತ ಪುಣ್ಯಭೂಮಿ. ಇದು ದೇವಸಾನಿಧ್ಯ ದಟ್ಟಿಸಿದ ದೇಶವೂ ಅಹುದು. ಇದು ತ್ಯಾಗ ಭೂಮಿ, ಯೋಗ ಭೂಮಿ, ಕರ್ಮ ಭೂಮಿ, ಅಸಂಖ್ಯ ಶೂರರು, ವೀರರು, ಧೀರರು ಆಳಿದ ದೇಶವಿದು. ಅಪಾರ ಯೋಗಿಗಳು, ತ್ಯಾಗಿಗಳು, ಸಂತರು, ಸನ್ಯಾಸಿಗಳು ತಪಸ್ಸುಗೈದ ದೇಶವಿದು. ಇದುವೇ ’ಭಾರತ ಗೌರವ’ ವೇದಗಳು ಭಾರತೀಯ ಸಂಸ್ಕೃತಿಯ ಅಡಿಗಲ್ಲು, ಅಂದು ಇಂದು ಮುಂದು ವೇದಗಳೇ ನಮ್ಮ ಬೆಳಕು. ಮನುಷ್ಯನ ಅಂತಃಸ್ಸತ್ವ ಅರಳಿಸುವ ಜ್ಞಾನ ವೇದಗಳಲ್ಲಿ ಇದೆ. ಕತ್ತಲೆ ಕಳೆಯಬೇಕು. ಬೆಳಕು ಪಡೆಯಬೇಕು. ಇದಕ್ಕಾಗಿ ವೇದಗಳು ಬೇಕು. ಇದರ ಮರ್ಮ ಅರಿಯಲು “ಭಾರತ ಗೌರವ ಶಿಬಿರ”ವನ್ನು ಆಯೋಜಿಸಲಾಗಿದೆ.

ಭಾರತದ ಪರಂಪರೆ ಪೂರ್ಣವಾಗಿ ಅರಿಯಬೇಕಾಗಿದೆ. ಮಸುಕಾದ ನಮ್ಮ ಸಂಸ್ಕೃತಿ-ಸ್ಮರಣೆಗೆ ಹೊಳಪು ನೀಡಬೇಕಾಗಿದೆ. ಭಾರತದಲ್ಲಿ ಆಗಿಹೋದ ಪ್ರಾತಃಸ್ಮರಣೀಯರನ್ನು ನೆನೆಯಬೇಕು. ವಿಶ್ವಗುರು ಪರಂಪರೆ ಮೆರೆಯಲು ನಾವೆಲ್ಲ ಸಿದ್ದರಾಗಬೇಕು. ಸಂಸ್ಕೃತಿಯ ತೇರು ಎಳೆಯಲು, ಪರಂಪರೆಯ ಪಲ್ಲಕ್ಕಿ ಹೊರಲು ಮನಸ್ಸು ಮಾಡಬೇಕು. ದೇವರು ದಯಪಾಲಿಸಿದ ಶಕ್ತಿ, ಯುಕ್ತಿ, ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕು. ಈ ಸಿದ್ಧತೆಗಾಗಿ ”ಭಾರತ ಗೌರವ ಶಿಬಿರ”ವನ್ನು ಹಮ್ಮಿಕೊಂಡಿದೆ.

ಭಾರತ ಗೌರವ ಶಿಬಿರ ಜೂನ್ 14 ರಿಂದ 22 ವರೆಗೆ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲಿ, ಪ್ರಶಾಂತ ವಾತಾವರಣ ನೆಲೆಸಿದ ಆರೋವೇದ ತೋಟ (ಎಡಮಡು ಗ್ರಾಮ)ದಲ್ಲಿ ಆಯೋಜಿಸಲಾಗಿದೆ. 30 ರಿಂದ 35 ಆಸಕ್ತರು ಮಾತ್ರ ಭಾಗವಹಿಸಲು ಅವಕಾಶ ಇದೆ. 20 ರಿಂದ 50 ವರ್ಷದೊಳಗಿನ ಸ್ತ್ರೀ ಪುರುಷರೆಲ್ಲ ಭಾಗವಹಿಸಬಹುದು. ಪ್ರವೇಶ ಉಚಿತ. ಸರಳ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು.ವಿವಿಧ ಕ್ಷೇತ್ರದ ಸಾಧಕರು, ವಿದ್ವಾಂಸರು ಮಾರ್ಗದರ್ಶನ ನೀಡಲಿದ್ದಾರೆ. ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಆಟೋಟಗಳೂ ಶಿಬಿರದ ಭಾಗ ಆಗಿರುತ್ತವೆ.

ಎಲ್ಲ ಶಿಬಿರಾರ್ಥಿಗಳಿಗೂ ಅಧ್ಯಯನ ಸಾಮಗ್ರಿ, ಉಚಿತವಾಗಿ ನೀಡಲಾಗುವುದು. ಭಾರತೀಯ ಸಂಸ್ಕೃತಿಯ ರಕ್ಷಣೆ, ವರ್ಧನೆಗಾಗಿ ಆಸಕ್ತಿ ಹೊಂದಿದವರು ನಮೂದಿತ ಅರ್ಜಿ ಭರ್ತಿ ಮಾಡಿ ಕಳಿಸಲು ವಿನಂತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-05-2025. ಆಯ್ಕೆ ಆದವರಿಗೆ 30-05-2025 ಒಳಗೆ ತಿಳಿಸಲಾಗುವುದು.ಬನ್ನಿ, ಭಾಗವಹಿಸಿ, ಜ್ಞಾನಸಾಗರದಲ್ಲಿ ಈಜಾಡೋಣ. ಕರ್ಮ ಯೋಗದ ಆಕಾಶದಲ್ಲಿ ಹಾರಾಡೋಣ, ಇದು ಸಮಾಜ ಯೋಗ,

ಅರ್ಜಿ ಹಾಗೂ ಇತರ ಮಾಹಿತಿಗಾಗಿ ಶಿಬಿರ ಸಂಯೋಜಕರಾದ ಬಿಂದು ಮಾಧವ ವಿ.ಜೆ. 9008833886
ಸಂಪರ್ಕಿಸಬಹುದಾಗಿದೆ.

www.vedah.com ವೆಬ್ಸೈಟ್ ಗೆ ಭೇಟಿ ನೀಡಿ.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment