Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊಲೆ ಕೇಸಲ್ಲಿ ಭೈರತಿ ಬಸವರಾಜ್ : ಬಿಜೆಪಿಗರನ್ನ ಟಾರ್ಗೆಟ್ ಮಾಡ್ತಿದೆ ಅಂದ್ರು ವಿಜಯೇಂದ್ರ..!

---Advertisement---

ಕಲಬುರಗಿ: ರೌಡಿಶೀಟರ್ ಬಿಕ್ಲ ಶಿವು ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಗರನ್ನೇ ಟಾರ್ಗೆಟ್ ಮಾಡ್ತಿದೆ ಎಂದಿದ್ದಾರೆ.

ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಕಳೆದ ಎರಡು ವರ್ಷದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ಬಿಜೆಪಿ ಶಾಸಕರನ್ನು ಬೆದರಿಸುವಂತ ಕುತಂತ್ರಗಳು ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ನಮ್ಮ ಹರೀಶ್ ಪೂಂಜಾ ಮೇಲೆ ಎಫ್ಐಆರ್ ರಿಜಿಸ್ಟರ್ ಮಾಡಿ, ಅವರನ್ನು ಬಂಧಿಸುವಂತ ಪ್ರಯತ್ನ ಮಾಡಿದ್ರು, ಅದು ಸಫಲ ಆಗ್ಲಿಲ್ಲ. ಅದನಂತರ ಭರತ್ ಶೆಟ್ಟಿ ಮೇಲೆ ಎಫ್ಐಆರ್ ಹಾಕಿದ್ರು. ಅದೇ ರೀತಿ ನಮ್ಮ‌ ಬೇರೆ ಬೇರೆ ಶಾಸಕರ ಮೇಲೆ ಈ ರೀತಿ ಎಫ್ಐಆರ್ ರಿಜಿಸ್ಟರ್ ಮಾಡಿ, ಹೆದರಿಸುವಂತ ಕೆಲಸ ಮಾಡ್ತಾ ಇದ್ದಾರೆ.

ಈಗ ನೋಡಿದ್ರೆ ಒಬ್ಬ ಹಿಂದುಳಿದ ನಾಯಕ, ಮಾಜಿ ಸಚಿವರಾಗಿರುವ ಭೈರತಿ ಬಸವರಾಜ್ ಅವರನ್ನ ಇವತ್ತು ರಾಜಕೀಯವಾಗಿ ಅವರನ್ನು ಮುಗಿಸುವಂತಹ ಷಡ್ಯಂತ್ರ ನಡೆಯುತ್ತಿದೆ ಅನ್ನೋದು ಅಲ್ಲಲ್ಲಿ ಚರ್ಚೆಗಳು ಕೂಡ ಆಗ್ತಾ ಇದೆ. ಸ್ವತಃ ಭೈರತಿ ಬಸವರಾಜ್ ಅವರು ಕೂಡ ಹೇಳಿಕೆ ನೀಡಿದ್ದಾರೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಹೆದರಿಸುವ, ಬೆದರಿಸುವ ಕೆಲಸ ಮಾಡ್ತಾ ಇದೆ. ಯಾರೂ ದೂರನ್ನ ನೀಡಿದ್ರು ಅವರೇ ನಾನೂ ಭೈರತಿ ಬಸವರಾಜ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment