Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೀಮಾ ತೀರದ ಭಾಗಪ್ಪ ಹರಿಜನ ಕೊಲೆಗೆ ಹಿಂದೆ ಕೆಲಸದವಳಾ ಕೈವಾಡವಿದೆಯಾ..?

---Advertisement---

ವಿಜಯಪುರ: ಜಿಲ್ಲೆಯ ಜನರನ್ನು ನಡುಗಿಸುವ ಭೀಕರ ಹತ್ಯೆಯೊಂದು ನಡೆದು ಹೋಗಿದೆ. ಭೀಮಾತೀರದ ಹಂತಕ, ರೌಡಿಶೀಟರ್, ಕುಖ್ಯಾತ ನಟೋರಿಯಸ್ ಎನಿಸಿಕೊಂಡಿದ್ದ 50 ವರ್ಷದ ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದಾನೆ. ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಲವು ಕೊಲೆ ಮತ್ತು ದರೋಡೆಗಳನ್ನು ಮಾಡಿರುವ ಕೇಸುಗಳು ಬಾಗಪ್ಪ ಹರಿಜನ ಮೇಲಿವೆ. ಈತನನ್ನು ಮಂಗಳವಾರ ರಾತ್ರಿ ಅಟ್ಯಾಕ್ ಮಾಡಿದ್ದು, ಆತನ ಮುಖ, ಕೈಗಳು, ದೇಹವನ್ನು ಕೊಚ್ವಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಎಲ್ಲಾ ಆಯಾಮದಿಂದಾನೂ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಬಾಗಪ್ಪ ಪುತ್ರಿಯರಿಗೆ ಮನೆ ಕೆಲಸದಾಕೆ ಮೇಲೆಯೇ ಅನುಮಾನ ಮೂಡಿದೆ.

ಬಾಗಪ್ಪ ಹರಿಜನ್ ವಿಜಯಪುರ ಹೊರವಲಯದ ಮದೀನಾ ನಗರದಲ್ಲಿ ಬಾಡಿಗೆ ಮನೆಯಲಗಲಿದ್ದ. ಅಡುಗೆ ಕೆಲಸಕ್ಕಾಗಿ ತನ್ನ ಸಂಬಂಧಿಯೇ ಆಗಿದ್ದಂತ ಸಂಜನಾ ಎಂಬಾಕೆಯನ್ನು ನೇಮಕ ಮಾಡಲಾಗಿತ್ತು. ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿರುವುದು ಬಾಗಪ್ಪನ ವಿರೋಧಿಗಳಿಗೆ ತಿಳಿದಿರಲಿಲ್ಲ‌. ಆದರೂ ಏಕಾಏಕಿ ಬಾಗಪ್ಪನ ಮೇಲೆ ಮಂಗಳವಾರ ದಾಳಿ ನಡೆದಿದೆ. ಹೀಗಾಗಿ ಮನೆ ಕೆಲದಾಕೆ ಮೇಲೆ ಅನುಮಾನ ಮೂಡಿದೆ.

ಈ ಸಂಬಂಧ ಗಂಗೂಬಾಯಿ ಹಾಗೂ ಇಂದ್ರಾಬಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸಂಜನಾಳ ಮೇಲೆ ನಮಗೆ ಅನುಮಾನವಿದೆ. ಯಲ್ಲಪ್ಪನ ಹರಿಜನ ಮಗ ಭೀಮಶಿ ಹರಿಜನ ಇವರೆಲ್ಲರೂ ಸೇರಿ ಹತ್ಯೆ ಮಾಡಿರಬಹುದು. ಹಾಗೆ ನಮ್ಮ ತಂದೆ ಹತ್ಯೆ ಬಳಿಕ ಅವರ ಫೋಟೋವನ್ನು ಪಿಂಟ್ಯೂ ಅಲಿಯಾಸ್ ಪ್ರಕಾಶ್ ಹಾಕಿಕೊಂಡಿದ್ದ. ನನ್ನ ಸಹೊಇದರನ ಆತ್ಮಕ್ಕೆ ಶಾಂತಿ ಸಿಕ್ತು ಅಂತ ಸ್ಟೇಟಸ್ ಹಾಕಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment