ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್,ಚಿತ್ರದುರ್ಗ, ಫೆಬ್ರವರಿ. 15 : ಬರ್ಮುಡಾ ಟ್ರಯಾಂಗಲ್ ಇದನ್ನು ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯಲಾಗುವುದು. ಇದು ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಒಂದು ಪ್ರದೇಶ ಇಲ್ಲಿ ಹಲವಾರು ಹಡಗುಗಳು ಮತ್ತು ವಿಮಾನಗಳು ಯಾವುದೇ ಸುಳಿವು ಇಲ್ಲದೇ ನಿಗೂಡವಾಗಿ ಕಣ್ಮರೆಯಾಗಿವೆ ಎಂಬ ಕಾರಣಕ್ಕೆ ಇದು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿದೆ. ಇದು ಉತ್ತರ ಅಟ್ಲಾಂಟಿಕ್ ಸಾಗರವಾಗಿದೆ. ಮತ್ತು ನಿಗೂಡವಾಗಿ ಕಣ್ಮರೆಯಾಗಿವೆ ಎಂಬ ಕಾರಣಕ್ಕೆ ಇದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ಲೋರಿಡಾ, ಬರ್ಮುಡಾ ದ್ವೀಪ ಪೋರ್ಟೊರಿಕೋ ಈ ಪ್ರದೇಶಗಳು ಒಟ್ಟು 500,000 ಚದರ ಮೈಲಿಗಳಷ್ಟು ವಿಸ್ತಾರವಾಗಿದೆ.
ಅನೇಕ ವರ್ಷಗಳಿಂದ ಇದು ನಿಗೂಡ ಎಂದು ನಂಬಲಾಗಿದ್ದರೂ ವಿಜ್ಞಾನಿಗಳು ಮತ್ತು ಹವಾಮಾನ ಶಾಸ್ತ್ರಜ್ಞರು ಕೆಲವು ಕಾರಣಗಳನ್ನು ನೀಡಿದ್ದಾರೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಷಡ್ಬುಜೀಯ ಆಕಾರದ ಮೋಡಗಳು ರೂಪುಗೊಳ್ಳುತ್ತವೆ. ಈ ಮೋಡಗಳು ಗಂಟೆಗೆ 170 ಮೈಲುಗಳಷ್ಟು ವೇಗದ ಗಾಳಿಯನ್ನು ಸೃಷ್ಟಿಸುತ್ತವೆ. ಇದನ್ನು “ಏರ್‍ಬಾಂಬ್‍ಗಳು” ಎಂದು ಕರೆಯಲಾಗುವುದು. ಈ ಗಾಯಿಯ ಸ್ಪೋಟಗಳು ಸಮುದ್ರದ ಮೇಲೆ ರಾಕ್ಷಸ ಅಲೆಗಳನ್ನು ಸೃಷ್ಟಿಸಿ ಹಡಗುಗಳನ್ನು ಮುಳುಗಿಸಬಹುದು ಮತ್ತು ವಿಮಾನಗಳನ್ನು ಉರುಳಿಸಬಹುದು.
ಸಮುದ್ರದ ತಳದಲ್ಲಿ ಸಾಮಾನ್ಯ ಪ್ರಮಾಣದ ಮೀಥೆನ್ ಹೈಡ್ರೇಟ್ ಅನಿಲದ ನಿಕ್ಷೇಪವಿದೆ. ಭೂವೈಜ್ಞಾನಿಕ ಚಟುವಟಿಕೆಯಿಂದ ಈ ಅನಿಲವು ಇದ್ದಕ್ಕಿದ್ದಂತೆ ಮೇಲ್ಮೈಗೆ ಬಂದು ನೀರಿನ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ನೀರಿನ ಸಾಂದ್ರತೆ ಕಡಿಮೆಯಾದಾಗ ಹಡುಗಳು ತೇಲುವ ಸಾಮಥ್ರ್ಯ ಕಳೆದುಕೊಂಡು ತಕ್ಷಣವೇ ಮುಳುಗುತ್ತವೆ. ಇದು ಸಮುದ್ರದೊಳಗಿನ ಒಂದು ವೇಗವಾದ ನದಿ (ಪ್ರವಾಹದಂತಿದೆ, ಅಪಘಾತಕ್ಕೀಡಾದ ಹಡಗುಗಳ ಅವಶೇಷಗಳನ್ನು ಈಪ್ರವಾಹವು ಬೇಗನೆ ದೂರ ಕೊಂಡೂಯ್ಯವುದರಿಂದ ಅವುಗಳನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ದಿಕ್ಸೂಚಿಯು ಇಲ್ಲಿ ತಪ್ಪು ದಿಕ್ಕನ್ನು ತೋರಿಸಬಹುದು.
ಭೂಮಿಯ ನಿಜವಾದ ಉತ್ತರ ದಿಕ್ಕು ಮತ್ತು ದಿಕ್ಸೂಚಿ ತೋರಿಸುವ ಉತ್ತರ ದಿಕ್ಕುಗಳು ಇಲ್ಲಿ ಒಂದೇ ಆಗಿರುವುದು ದಾರಿ ತಪ್ಪಲು ಕಾರಣವಾಗಬಹುದು. ಕೆಟ್ಟ ಹವಮಾನ ಅನಿರೀಕ್ಷಿತ ಬಿರುಗಾಳಿಗಳು ಮತ್ತು ನಾವಿಕರ ಪೈಲೆಟ್‍ಗಳ ಸಣ್ಣ ತಪ್ಪುಗಳು ಈ ಪ್ರದೇಶದಲ್ಲಿನ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.

ವಿಜ್ಞಾನಿಗಳ ಪ್ರಕಾರ ಬರ್ಮುಡಾ ಟ್ರಯಾಂಗಲ್‍ನಲ್ಲಿ ಹೆಚ್ಚು ಸಂಚಾರ ಇರುವ ಹಡುಗು ಮಾರ್ಗವಾಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಕಾಣುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
ಅನೇಕ ದಂತಕಥೆಗಳು ಇದ್ದರೂ ವೈಜ್ಞಾನಿಕವಾಗಿ ಇದು ನೈಸರ್ಗಿಕ ಪರಿಸ್ಥಿತಿಗಳು ಮತ್ತು ಭೂವೈಜ್ಞಾನಿಕ ರಚನೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳ ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇರುತ್ತಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.








