Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಟಿಕೆಟ್ ಇಲ್ಲದೆ ಇದ್ದರೆ ನಾಳೆ ಸ್ಟೇಡಿಯಂ ಬಳಿ ಯಾರೂ ಬರಬೇಡಿ : ಬೆಂಗಳೂರು ಕಮಿಷನರ್ ಎಚ್ಚರಿಕೆ

---Advertisement---

ಬೆಂಗಳೂರು: ಆರ್ಸಿಬಿ ಪಂದ್ಯಗಳು ಅಂದ್ರೆನೆ ಕ್ರಿಕೆಟ್ ಪ್ರೇಮಿಗಳಿಗೆ ಅದರಲ್ಲೂ ಕರ್ನಾಟಕದವರಿಗೆ ಅತಿಯಾದ ವ್ಯಾಮೋಹ. ಕಳೆದ ಬಾರಿ ಆರ್ಸಿಬಿ ಕಪ್ ಗೆದ್ದಿದ್ದನ್ನ ಹೊತ್ತು ಮೆರೆಸಿದ್ದಾರೆ. ದುರಾದೃಷ್ಟವಶಾತ್ ಕಪ್ ನೋಡಲು ಬಂದ ಹನ್ನೊಂದು ಜನ ಕಾಲ್ತುಳಿತದಿಂದ ಸಾವನ್ನಪ್ಪಿದ್ದರು. ಈ ಸೂತಕದ ಛಾಯೆಯಿಂದ ಮತ್ತೆ ಬೆಂಗಳೂರಲ್ಲಿ ಪಂದ್ಯಗಳೇ ನಡೆಯೋದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಸದ್ಯ ಕ್ರಿಕೆಟ್ ಪ್ರೇಮಿಗಳು ಖುಷಿ ಪಡುವಂತಾಗಿದೆ. ಪಂದ್ಯಗಳು ನಡೆಯುತ್ತಿವೆ. ಆದರೆ ಟಿಕೆಟ್ ಇಲ್ಲದೆ ಬರುವವರಿಗೆ ಕಮಿಷನರ್ ಎಚ್ಚರಿಕೆಯನ್ನ ನೀಡಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಐಪಿಎಲ್ ಉದ್ಘಾಟನಾ ಪಂದ್ಯಗಳು ನಡೆಯಲಿವೆ. ಸ್ಟೇಡಿಯಂ ಸುತ್ತಮುತ್ತಾ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಕ್ರಿಕೆಟ್ ನೋಡಬೇಕು, ಆಫ್ಲೈನ್ ನಲ್ಲಿಯೇ ಟಿಕೆಟ್ ಸಿಗುತ್ತೆ ಅಂತ ಬರೋರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಎಚ್ಚರಿಕೆಯನ್ನ ನೀಡಿದ್ದಾರೆ.

ಚಿನ್ನಸ್ಚಾಮಿ ಸ್ಟೇಡಿಯಂ ಬಳಿ ಮೂರು ಹಂತದ ಸೆಕ್ಯುರಿಟಿ ಇರಲಿದೆ. ಆರ್ಎಎಫ್ ಮತ್ತು ಗರುಡ ಟೀಂ, ಪಿಕಪ್ ಸ್ಕ್ವ್ಯಾಡ್ ಇದೆ. ಭದ್ರತೆಗೆಂದು 2,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆಫ್ಲೈನ್ ಟಿಕರಟ್ ಗಳು ಸಿಗುತ್ತವೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ ಅವಕಾಶ ನೀಡಲ್ಲ. ಟಿಕೆಟ್ ಇಲ್ಲದಿದ್ದರೆ ಮನೆಯಲ್ಲಿಯೇ ಕೂತು ಪಂದ್ಯಗಳನ್ನು ನೋಡಿ, ಎಂಜಾಯ್ ಮಾಡಿ. ಇಲ್ಲಿಗೆ ಬಂದು ತೊಂದರೆ ತೆಗೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಆರ್ಸಿಬಿ ಅಂದ್ರೆ ನಮ್ಮ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಇನ್ನಿಲ್ಲದ ಜೋಶು. ಹೆಚ್ಚು ಜನ ಸೇರಿ, ಏನಾದರೂ ತೊಂದರೆ ಆಗುವುದು ಬೇಡ ಎಂಬ ಎಚ್ಚರಿಕೆಯನ್ನ ನೀಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now