ಬೆಂಗಳೂರು: ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಬ್ಯಾನರ್ ಕಟ್ಟುವಂತಹ ವಿಚಾರದಲ್ಲಿ ಒಂದು ಹೆಣವೇ ಬಿದ್ದಿದೆ. ಹೀಗಾಗಿ ಬಳ್ಳಾರಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಇದರ ನಡುವೆ ಪರಿಸ್ಥಿತಿಯನ್ನ ಸರಿಯಾಗಿ ನಿಭಾಯಿಸದ ಕಾರಣ ಹಾಗೂ ಹಿರಿಯ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡದೆ ಇರುವ ಕಾರಣಕ್ಕೆ ಕೇವಲ ಒಂದೇ ಒಂದು ದಿನದ ಹಿಂದಷ್ಟೇ ಬಳ್ಳಾರಿಗೆ ವರ್ಗಾವಣೆಯಾಗಿದ್ದ ಪವನ್ ನೆಜ್ಜೂರು ತೆಲದಂಡವಾಗಿತ್ತು. ಈ ಬೆನ್ನಲ್ಲೇ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಾ ಇದೆ.
ಪವನ್ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಾತ್ರೆಗಳನ್ನ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ. ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಮಾತ್ರೆಗಳನ್ನ ಸೇವಿಸಿದ್ದರು ಎನ್ನಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗ್ತಾ ಇದೆ. ಆದರೆ ಈ ಸಂಬಂಧ ಅಧಿಕೃತವಾದಂತ ಮಾಹಿತಿ ಸಿಕ್ಕಿಲ್ಲ.

ಅವರ ಆತ್ಮಹತ್ಯೆ ವಿಚಾರವಾಗಲಿ ಅಥವಾ ಅಮಾನತು ಮಾಡಿಕೊಂಡ ವಿಚಾರಕ್ಕಾಗಲೀ ಯಾವ ವಿಚಾರಕ್ಕೆ ಈ ಘಟನೆ ನಡೆದಿದೆ ಎಂಬುದು ಇನ್ನು ಅಧಿಕೃತವಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ಆತ್ಮಹತ್ಯೆಗೆ ಯತ್ನವನ್ನ ಮಾಡಿದ್ದಾರೆ ಎಂಬುದು ಅವರ ಸ್ನೇಹಿತರ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರ ತೆಗೆದುಕೊಳ್ಳುವುದಕ್ಕೂ ಮುನ್ನ ಕನಕದುರ್ಗ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನ ಸಲ್ಲಿಸಿ, ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಅವರು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಬಳ್ಳಾರಿ ಘಟನೆ ನಡೆದಿತ್ತು. ಬಳ್ಳಾರಿಗೆ ಬರುವುದಕ್ಕೂ ಮೊದಲು 11 ವರ್ಷಗಳಿಂದ ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸುತ್ತಿದ್ದವರು. 11 ವರ್ಷಗಳ ಬಳಿಕ ಎಸ್ಪಿಯಾಗಿದ್ದರು. ಯೂನಿಫಾರ್ಮ್ ಧರಿಸಿದ್ದರು. ಇಂತಹ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿದೆ.


















