Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮತ್ತೆ ಮುನ್ನೆಲೆಗೆ ಬಂತು ಬೆಳಗಾವಿ – ಧಾರವಾಡ ನೇರ ರೈಲು : ಬಿಜೆಪಿಯ ಇಬ್ಬರು ಸಂಸದರು ಯಶಸ್ಸು ಮಾಡ್ತಾರಾ..?

---Advertisement---

ಧಾರವಾಡ: ಕೆಲವೊಂದು ಯೋಜನೆಗಳೇ ಹಾಗೆ. ಘೋಷಣೆಯಾದ ಮೇಲೆ ಜಾರಿಯಾಗೋದೆ ಕಷ್ಟ. ನಾಮಕಾವಸ್ಥೆಗೆ ಘೋಷಣೆಯಾಗಿ ಹಾಗೇ ಉಳಿದು ಬಿಡುತ್ತವೆ. ಅದೇ ಹಾದಿಯಲ್ಲಿರುವುದು ಧಾರವಾಡ-ಬೆಳಗಾವಿ ನೇರ ರೈ ಯೋಜನೆ. ಇದೀಗ ಮತ್ತೆ ಅಸ ಯೋಜನೆ ಮುನ್ನೆಲೆಗೆ ಬಂದಿದೆ. ಅದಕ್ಕೆ‌ ಕಾರಣ ಲೋಕಸಭಾ ಚುನಾವಣೆಯಲ್ಲಿ ಎರಡು ಕಡೆ ಬಿಜೆಪಿ ಬಂದಿರುವುದು.

ಧಾರವಾಡದಲ್ಲಿ ಈ ಬಾರಿಯೂ ಪ್ರಹ್ಲಾದ್ ಜೋಶಿಯೇ ಗೆಲುವು ಕಂಡಿದ್ದಾರೆ. ಸಂಸತ್ ಗೆ ಆಯ್ಕೆಯಾಗಿದ್ದಾರೆ. ಇನ್ನು ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆದ್ದಿದ್ದಾರೆ. ಇಬ್ಬರು ಸಂಸದರಾಗಿರುವ ಕಾರಣ ಈ ಯೋಜನೆಗೆ ಇನ್ನಾದರೂ ಚಾಲನೆ ಸಿಗುತ್ತಾ ಎಂಬುದನ್ನು ಜನ ಎದುರು ನೋಡುತ್ತಿದ್ದಾರೆ.

ಧಾರವಾಡ ಬೆಳಗಾವಿ ರೈಲು ಯೋಜನೆಯ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಿ, ಅದು ಜಾರಿಯಾಗುವ ಹಂತಕ್ಕೂ ಬಂದಿತ್ತು. ಆದರೆ ಅನೇಕ ಕಾರಣಗಳಿಂದ ಅದು ಮುಂದುವರೆಯುತ್ತಲೇ ಇಲ್ಲ. ಧಾರವಾಡದಿಂದ ಬೆಳಗಾವಿಗೆ ಈಗಿರುವ ರೈಲಿನ ಮೂಲಕ ಹೋದರೆ ಬರೋಬ್ಬರಿ ಮೂರು ಗಂಟೆ ಬೇಕು. ಏಕೆಂದರೆ ಧಾರವಾಡದಿಂದ ಹೊರಡೋ ರೈಲು ಅಳ್ನಾವರ್, ಲೋಂಡಾ, ಖಾನಾಪುರ ಮೂಲಕ ಬೆಳಗಾವಿ ಮುಟ್ಟಬೇಕಿದೆ. ಆದರೆ ಈ ಮಾರ್ಗದ ಬದಲಿಗೆ ನೇರವಾಗಿ ಧಾರವಾಡ-ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ, ಧಾರವಾಡದಿಂದ ಬೆಳಗಾವಿಗೆ ಅರ್ಧ ಗಂಟೆಯಲ್ಲಿಯೇ ತಲುಪಬಹುದಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment