ಬಡ ಮಕ್ಕಳ ಜ್ಞಾನ ದಾಸೋಹದ ರೂವಾರಿ ಬೆಳಗೆರೆ ಕೃಷ್ಣ ಶಾಸ್ತ್ರೀ :  ಭಾವನ ಬೆಳಗೆರೆ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜುಲೈ 20 : ಗ್ರಾಮೀಣ ಭಾಗದ ನೂರಾರು ಬಡ ಮಕ್ಕಳ ಜ್ಞಾನ ದಾಸೋಹದ ರೂವಾರಿ ಖ್ಯಾತ ಸಾಹಿತಿ ದಿವಂಗತ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎಂದು ವಿದ್ಯಾಸಂಸ್ಥೆ ನಿರ್ದೇಶಕಿ ಭಾವನ ಬೆಳಗೆರೆ ಹೇಳಿದರು.

ತಾಲ್ಲೂಕಿನ ಬೆಳಗೆರೆ ಗ್ರಾಮದ ಶಾರದಾ ಮಂದಿರ ವಿದ್ಯಾ ಸಂಸ್ಥೆ, ಸೀತಾರಾಮ ಶಾಸ್ತ್ರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಾಂಸ್ಕೃತಿಕ ಚಟವಟಿಕೆ ಮತ್ತು ಪ್ರತಿಭಾ ಪುರಸ್ಕಾರ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ವಾತಾವರಣ ನೋಡಿದರೆ ವಿಶ್ವವಿದ್ಯಾಲಯದಂತೆ ಗೋಚರಿಸುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳೇ ಧನ್ಯರು. ಸಾಮಾಜಿಕ ಬದುಕಿನಲ್ಲಿ ಧರ್ಮ, ಜಾತಿ ಮತ್ತು ಮತಬೇಧಗಳು ಅರ್ಥಶೂನ್ಯವೆಂದು ತಿಳಿದಿದ್ದ ಕೃಷ್ಣಶಾಸ್ತ್ರಿ ಯವರಿಗೆ ಹೃದಯ ಸ್ಪಂದನೆ, ಶೈಕ್ಷಣಿಕ ಚಿಂತನೆಯ ದೂರದೃಷ್ಟಿಯೂ ಅವರಲ್ಲಿತ್ತು. ಅವರ ಬದುಕು-ಬರಹ ಹಾಗೂ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಶ್ರದ್ಧೆ, ಪರಿಶ್ರಮ, ಆಧ್ಯಾತ್ಮ ಚಿಂತನೆಯಿಂದ ರೂಪಿಸಿರುವ ಶಿಕ್ಷಣ ಸಂಸ್ಥೆ ಪ್ರಗತಿಗೆ ನಾವೆಲ್ಲರೂ ಸದಾ ಕೈಜೋಡಿಸಬೇಕು ಎಂದು ಹೇಳಿದರು.

ಪ್ರಾರ್ಥನ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾರದಾ ವಿದ್ಯಾ ಸಂಸ್ಥೆ ಉಪಾಧ್ಯಕ್ಷೆ  ಲಲಿತಮ್ಮ ಬೆಳಗೆರೆ ಮಾತನಾಡಿ, ಅದೆಷ್ಟೋ ಶಾಲೆಗಳಲ್ಲಿ ವಿದ್ಯಾರ್ಥಿಗೆ ಆಟವಾಡಲು ಕ್ರೀಡೆ ಚಟುವಟಿಕೆಯಲ್ಲಿ ಭಾಗವಹಿಸಲು ಆಟದ ಮೈದಾನ ಇರುವುದಿಲ್ಲ.  ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ವಿಶಾಲವಾದ ಆಟದ ಮೈದಾನವಿದೆ ,ಉಚಿತ ಶಿಕ್ಷಣವಿದೆ ,ಊಟವಿದೆ ಇರಲು ವಸತಿ ಇದೆ.

ಈ ಶಾಲೆ ಅದೆಷ್ಟೋ ಬಡ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದೆ. ಇದಕ್ಕೆ ನಮ್ಮ ಶಾಸ್ತ್ರೀಜಿ ಯವರ ಪರಶ್ರಮವಿದೆ. ಅವರು ಈ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಗ್ರಾಮೀಣ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹದ ಜತೆಗೆ ಹೆಚ್ಚಿನ ಆರ್ಥಿಕ ನೆರವು ಅತ್ಯಗತ್ಯ ಎಂದು ಹೇಳಿದರು.

ಜಂಟಿ ಸಂಸ್ಥೆ ಕಾರ್ಯದರ್ಶಿ ಹೆಚ್.ಮಂಜುನಾಥ್,  ಮಾತನಾಡಿ, ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನಡತೆ ಕಲಿಸಲಾಗುತ್ತಿದೆ. ಇದಕ್ಕೆಲ್ಲ ನಮ್ಮ ಹಿರಿಯರ ಮಾರ್ಗದರ್ಶನ ಅವರ ಸಹಕಾರ ಮುಖ್ಯವಾಗಿ ಬೇಕು ಇದ್ದರು.

ಬ್ಯಾಂಕ್ ನಿವೃತ್ತ ಅಧಿಕಾರಿ ವಿಜಯ ಕುಮಾರಿ ಮಾತನಾಡಿ, ನಾವು ಇಲ್ಲಿ ನೋಡುತ್ತಿರುವುದು ಒಂದು ಗುರುಕುಲ ತರ ಕಾಣಿಸುತ್ತದೆ.  ಇಲ್ಲಿನ ವಿದ್ಯಾರ್ಥಿಗಳ ಶ್ರದ್ಧೆ ಹಾಗೂ ಶಿಸ್ತು ಹಾಗೂ ವಿನಯ ನೋಡುತ್ತಿದ್ದರೆ ನಮಗೆ ಯಾಕೆ ಇಂತಹ ಅವಕಾಶ ಸಿಗಲಿಲ್ಲ ಎನಿಸುತ್ತದೆ. ಬಯಲು ಸೀಮೆ ಗಾಂಧಿ ಎಂದೇ ಕರೆಯುತ್ತಿದ್ದ ಕೃಷ್ಣ ಶಾಸ್ತ್ರ ಜಿ ಅವರು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಒಳ್ಳೆಯ ನಡತೆ ಹೇಳಿಕೊಟ್ಟಿದ್ದಾರೆ. ಸುಮಾರು ನಾಲ್ಕೈದು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರೆ ಸಾಲದು ಎಲ್ಲರೂ ಪ್ರತಿಭಾವಂತರಾಗಿ ಬೆಳೆಯಬೇಕು ಎಂದರು.

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸಮಯದಲ್ಲಿ ಮಾರ್ಗದರ್ಶಕ ಶ್ರೀಪಾದ ಪೂಜಾರ್, ಬ್ಯಾಂಕ್ ನಿವೃತ್ತ ಅಧಿಕಾರಿ ವಿಜಯಕುಮಾರಿ, ಆಧ್ಯಾತ್ಮಿಕ ಚಿಂತಕ ನಾಗೇಂದ್ರ, ಸಂಸ್ಥೆ ಆಡಳಿತಾಧಿಕಾರಿ ಕೆ.ರಾಜಣ್ಣ ಮಾತನಾಡಿದರು. ವಿದ್ಯಾರ್ಥಿಗಳಿಂದ ಕೋಲಾಟ, ಜಾನಪದ ನೃತ್ಯ ಮುಂತಾದ ವಿಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.
ಸಂಯೋಜನಾಧಿಕಾರಿ  ಪ್ರಾಂಶುಪಾಲೆ ಸರೋಜಮ್ಮ, ಮುಖ್ಯಶಿಕ್ಷಕ ವಿ.ಎಚ್.ವೀರಣ್ಣ, ಉಪನ್ಯಾಸಕ ಜೆ.ಚನ್ನಕೇಶ, ವಾಯಿದ್ ಶಿಕ್ಷಕ ಸುಹಾಸ್, ಗಿರೀಶ್, ಶಶಿಕಲಾ, ಆಶಾ  ಚಿದಾನಂದ ,ರಾಘವೇಂದ್ರ , ಪ್ರಸಾದ್ ವಿದ್ಯಾರ್ಥಿ ಗಳು ಪೋಷಕರು  ಇದ್ದರು.

Share This Article
Leave a Comment

Leave a Reply

Your email address will not be published. Required fields are marked *