ಎಸ್ ನೀವೂ ಕೇಳಿದ್ದು ಸತ್ಯ. ಅನೇಕ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಔಷಧ. ಹಿತ್ತಲಲ್ಲಿರುವ ಗಿಡಗಳೇ ಮದ್ದು. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತ ಭಾವನೆಯಿಂದ ನಾವೂ ಅದರ ಕಡೆಗೆ ಗಮನವನ್ನೇ ಕೊಡಲ್ಲ. ಆದ್ರೆ ಅದರಂತೆ ಹಿತ್ತಲಲ್ಲಿ ಬೆಳೆದ ಬೇಲದ ಹಣ್ಣು ಹಕವು ಕಾಯಿಲೆಗಳಿಗೆ ದಿವ್ಯೌಷಧ. ಅದರಲ್ಲೂ ಲಿವರ್ ಡ್ಯಾಮೇಜ್ ಆಗುವುದನ್ನು ತಪ್ಪಿಸುತ್ತದೆ. ಒಂದು ವೇಳೆ ಲಿವರ್ ಸಮಸ್ಯೆ ಇದ್ದವರು ಇದನ್ನ ಬಳಸಬಹುದು.
ಬೇಲದ ಹಣ್ಣನ್ನ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಪಾನಕ ಮಾಡುವುದಕ್ಕೆ ಬಳಸುತ್ತಾರೆ. ಅದನ್ನ ಬಿಟ್ಟರೆ ಉಳಿಕೆ ದಿನದಲ್ಲಿ ಈ ಬೇಲದ ಹಣ್ಣನ್ನ ತಿನ್ನುವ ಸಂಖ್ಯೆ ಕಡಿಮೆ. ಆದರೆ ಈ ಬೇಲದ ಹಣ್ಣು ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..? ಇದರಲ್ಲಿ ಏನೆಲ್ಲಾ ಅಂಶಗಳಿವೆ ಅನ್ನೋದು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ.
* ಲಿವರ್ ನಲ್ಲಿ ಏನೇ ಡ್ಯಾಮೇಜಸ್ ಸೆಲ್ಸ್ ಇದ್ರು ಕೂಡ ಅದನ್ನ ರಿಕವರಿ ಮಾಡುವ ಸಾಮರ್ಥ್ಯ ಈ ಹಣ್ಣಿಗಿದೆ.
* ಉಷ್ಣಾಂಶ ಹೆಚ್ಚಾಗಿದ್ರು ಈ ಹಣ್ಣನ್ನ ತಿನ್ನುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುವುದಕ್ಕೆ ಸಹಾಯ ಮಾಡುತ್ತದೆ.
* ಈ ಬೇಲದ ಹಣ್ಣು ಹಾರ್ಟ್ ಅಟ್ಯಾಕ್ ಆಗುವುದನ್ನು ತಪ್ಪಿಸುತ್ತದೆ. ನರಗಳ ನಡುವೆ ಕೊಬ್ಬು ಬೆಳೆದರೆ ಅದರಿಂದ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಆದರೆ ಈ ಬೇಲದ ಹಣ್ಣನ್ನ ತಿನ್ನೋದ್ರಿಂದ ಆ ಕೊಬ್ಬು ಕರಗುತ್ತದೆ.
* ಈ ಹಣ್ಣು ಈಗ ಹೆಚ್ಚಾಗಿ ಸಿಗುವುದಿಲ್ಲ. ಸಿಕ್ಕಾಗ ಎಲ್ಲರೂ ಈ ಹಣ್ಣನ್ನ ತಿನ್ನಿ. ಕೆಲವರು ಈ ಸಕ್ಕರೆ ಬೆರೆಸಿ ತಿನ್ನುವುದಕ್ಕೆ ಇಷ್ಟಪಡ್ತಾರೆ. ಹೇಗಾದರೂ ಸರಿ ಈ ಹಣ್ಣನ್ನ ಮಿಸ್ ಮಾಡದೆ ತಿನ್ನಿ.