Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಲಸಿನ ಬೀಜವನ್ನ ಬಿಸಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ : ನೂರೆಂಟು ಕಾಯಿಲೆಗೆ ರಾಮಬಾಣ ಈ ಬೀಜ

---Advertisement---

ಈಗ ಹಲಸು ಹಾಗೂ ಮಾವಿನ ಸೀಸನ್. ಈ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣನ್ನ ತಿನ್ನಬೇಕು. ಅದರಲ್ಲೂ ಹಲಸಿನ ಹಣ್ಣನ್ನ ತಿಂದವರು ಬೀಜ ಬಿಸಾಡುವ ಮುನ್ನ ಯೋಚಿಸಿ. ಈ ಸ್ಟೋರಿ ಓದಿ, ಅದರಿಂದ ಎಷ್ಟೆಲ್ಲಾ ಲಾಭವಿದೆ ಅನ್ನೋದು ಅರ್ಥವಾಗುತ್ತದೆ.

*ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ. ಈ‌ಮೂಲಕ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

* ವಿಟಮಿನ್ ಎ ಹೇರಳವಾಗಿರುವ ಕಾರಣ ಕಣ್ಣಿನ ದೃಷ್ಟಿಯೂ ಚೆನ್ನಾಗಿ ಆಗಲಿದೆ. ದೇಹಕ್ಕೆ ಬೇಕಾದ ವಿಟಮಿನ್ ಗಳ ಕೆಲ ಕೊರತೆಯನ್ನು ಈ ಹಲಸಿನ ಹಣ್ಣಿನ ಬೀಜ ನಿವಾರಿಸುತ್ತದೆ.

* ಈಗಿನ ಪೀಳಿಗೆ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಎಷ್ಡೊಂದು ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಲಸಿನ ಬೀಜದಿಂದ ಆ ಸಮಸ್ಯೆಯು ಬಗೆಹರಿಯುತ್ತದೆ.

* ಕೂದಲು ಆರೋಗ್ಯಯುತವಾಗಿ, ಉತ್ತಮವಾಗಿ ಬೆಳೆಯುವುದಕ್ಕೂ ಈ ಹಲಸಿನ ಹಣ್ಣಿನ ಬೀಜ ಸಹಾಯ ಮಾಡುತ್ತದೆ.

* ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಾ ಇರುವವರು ಈ ಹಲಸಿನ ಬೀಜವನ್ನ ಸುಟ್ಟು ತಿಂದು ನೋಡಿ, ಎಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದನ್ನು.

* ಅಷ್ಟೇ ಅಲ್ಲ ಚರ್ಮದ ಸುಕ್ಕನ್ನು ಹೋಗಲಾಡಿಸಿ, ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ.

* ನಾರಿನಂಶ ಎಲ್ಲರಿಗೂ ಮುಖ್ಯ. ಈ ಹಲಸಿನ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿದ್ದು, ಈಗ ಸೀಸನ್ ಮುಗಿಯುವ ಹೊತ್ತಿಗೆ ಚೆನ್ನಾಗಿ ತಿನ್ನಿ

* ಬ್ಲಡ್ ಫ್ಯೂರಿಫೈ ಕೂಡ ಮಾಡಲಿದೆ. ಈ ಮೂಲಕ ರಕ್ತ ನಾಳಗಳಲ್ಲಿ ರಕ್ತವು ಹೆಪ್ಪು ಗಟ್ಟುವುದನ್ನು ಇದು ತಡೆಯುತ್ತದೆ. ಇದರಿಂದ ರಕ್ಯ ಸಂಚಾರವೂ ಸುಗಮವಾಗಿ ಆಗಲಿದ್ದು, ಹಾರ್ಟ್ ಅಟ್ಯಾಕದ ನಂಥ ಸಮಸ್ಯೆಯೂ ಬರುವುದಿಲ್ಲ.

* ಪ್ರೋಟಿನ್ ಅಂಶ ಹೆಚ್ಚಾಗಿರುವ ಕಾರಣ ಮಾಂಸಖಂಡಗಳು ಬಲಗೊಳ್ಳುವ ಎಲ್ಲಾ ಅಂಶಗಳು ಇದರಲ್ಲಿ ಅಡಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...