ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯೆ ಜಗಳಗಳು ಆಗುವುದು ಕಾಮನ್. ಆದರೆ ಆ ಜಗಳದಲ್ಲಿ ಬರುವ ಮಾತುಗಳು ಬಹಳ ಮುಖ್ಯವಾಗುತ್ತದೆ. ಈ ವಾರದ ಎಪಿಸೋಡಿನಲ್ಲಂತೂ ಸದಸ್ಯರ ಬಾಯಲ್ಲಿ ಬಂದ ಮಾತುಗಳು ಅತ್ಯುತ್ತಮವಾಗಿತ್ತು. ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತ ಸ್ಪರ್ಧೆಯೇ ಇತ್ತು.
ಇಡೀ ವಾರ ಸದಸ್ಯರು ರೀತಿ ಕಿಚ್ಚನಿಗೂ ಬೇಸರ ತರಿಸಿದೆ. ಅದಕ್ಕೆ ಖಡಕ್ ಆಗಿಯೇ ಸುದೀಪ್ ಎಲ್ಲರಿಗೂ, ಈ ಟೀಂ ಕಡೆಯಿಂದ ಒಬ್ಬರು ಫೈನಲಿಸ್ಟ್ ರೆಡಿಯಾಗಿದ್ದಾರೆ. ಇನ್ನು ಆ ಟೀಂನಿಂದ ಒಬ್ಬರನ್ನ ರೆಡಿ ಮಾಡಿಬಿಡಿ. ಹದಿನೆಂಟು ವಾರದ ಬಿಗ್ ಬಾಸ್ ಅನ್ನ ನಾಲ್ಕೆ ವಾರದಲ್ಲಿ ಮುಗಿಸಿಬಿಡೋಣಾ ಎಂದಿದ್ದಾರೆ. ಈ ರೀತಿಯ ಮಾತುಕತೆ ಮುಗಿದ ಮೇಲೆ ಸುದೀಪ್ ನಮ್ರತಾ ಹಾಗೂ ಸಂಗೀತಾ ಜಗಳ ಹಾಗೂ ವಿನಯ್ ಆಡಿದ ಮಾತಿನ ಬಗ್ಗೆ ಅವರಿಬ್ಬರ ಬಳಿಯೇ ಕ್ಲಾರಿಟಿ ಕೇಳಿದ್ದಾರೆ.
ವಿನಯ್ ಈ ವಾರ ಬಳಸಿದ ಪದಗಳು ಒಂದೆರಡಲ್ಲ. ಬಳೆಗಳ ರಾಜ, ಗಂಡಸರ ಥರ ಆಡು, ಬಾರೋ ಗಂಡಸು ಬಾ ಹೀಗೆ ಹಲವು ಪದಗಳನ್ನು ಕಾರ್ತೀಕ್ ಮೇಲೆ ಪ್ರಯೋಗ ಮಾಡಿದರು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆಗಿದ್ದರು. ವಿನಯ್ ಬಳಿಯೇ ಅದಕ್ಕೆ ಕ್ಲಾರಿಟಿಯನ್ನು ಪಡೆದುಕೊಂಡರು. ಆದರೆ ವಿನಯ್ ಆಡಿದ ಮಾತಿಗೆ ಸ್ಪಷ್ಟನೆ ಕೊಡುವುದಕ್ಕೆ ರೆಡಿ ಇಲ್ಲ. ಆ ಮಾತುಗಳಿಗೆ ಅರ್ಥ ನೀಡುವುದರಲ್ಲಿಯೇ ಸೋತರು. ಅವರ ಅಕ್ಕ ಪಕ್ಕ ಇದ್ದ ಸ್ನೇಹಿತ್ ಹಾಗೂ ನಮ್ರತಾ ಬಳಿಯೂ ಕೇಳಿ, ಅದರ ನಿಜವಾದ ಅರ್ಥವನ್ನು ತಿಳಿಸಿ, ಅವರಿಬ್ಬರಿಗೂ ತಪ್ಪಿನ ಅರಿವು ಮೂಡಿಸಿದರು.
ವಾರದ ಕೊನೆಯಲ್ಲಿ ಇಡೀ ವಾರ ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಕಿಚ್ಚನ ಚಪ್ಪಾಳೆಗಾಗಿಯೇ ಸಾಕಷ್ಟು ಎಫರ್ಟ್ ಹಾಕಲಾಗುತ್ತದೆ. ಈ ವಾರ ಕಿಚ್ಚನ ಚಪ್ಪಾಳೆ ಒಂದು ಸ್ಪೆಷಲ್ ಆಗಿತ್ತು. ಅದುವೇ ವಿನಯ್ ಗೆ ಆ ಗಿಫ್ಟ್ ಸಿಕ್ಕಿದೆ. ಸಂಗೀತಾ ಅವರ ಬಳೆ ಇದ್ದಂತ ಫೋಟೋ ಬಂದಿದೆ. ಆ ಬಳೆಗಳ ಕೈಗೆ ಕಿಚ್ಚನ ಚಪ್ಪಾಳೆ ಹೋಗಿದೆ. ಅಂದರೆ ಸಂಗೀತಾಗೆ ಆ ಚಪ್ಪಾಳೆ ಸಿಕ್ಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















