Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆ ಶಿವಕುಮಾರ್ ಮನೆಗೆ ಬಸವರಾಜ್ ಬೊಮ್ಮಾಯಿ ಭೇಟಿ : ಕಾರಣ ಹೀಗಿದೆ..!

---Advertisement---

ಬೆಂಗಳೂರು: ಸಾಮಾನ್ಯ ಜನ ಮಾತ್ರ ನೀನು ಆ ಪಕ್ಷದ ಬೆಂಬಲಿಗ ನಾನು ಈ ಪಕ್ಷದ ಬೆಂಬಲಿಗ ಅಂತೆಲ್ಲ ಅನ್ನೋದು, ದ್ವೇಷ ಮಾಡೋದು, ಕಿತ್ತಾಡಿಕೊಳ್ಳೋದು. ಆದರೆ ರಾಜಕಾರಣಿಗಳು ಅಂದೆಂತದ್ದೇ ಕಿತ್ತಾಟ ಇರಲಿ, ಕೆಸರೆರಚಾಟ ನಡೆಸಿರಲಿ ಮನೆಯಲ್ಲಿ ದೊಡ್ಡ ಕಾರ್ಯಕ್ರಮ ಇದೆ ಅಂದಾಗ ಎಲ್ಲವನ್ನು ಮರೆತು ಆಹ್ವಾನ ಕೊಡುತ್ತಾರೆ. ಇದೀಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಡಿಕೆ ಶಿವಕುಮಾರ್ ಮನೆಗೆ ಬಂದಿದ್ದು, ಚರ್ಚೆಗೆ ಕಾರಣವಾಗಿತ್ತು. ಇದೀಗ ಬಂದಿದ್ದ ಕಾರಣದ ಬಗ್ಗೆ ಬೊಮ್ಮಾಯಿ ಅವರೇ ಸ್ಪಷ್ಟನೇ ನೀಡಿದ್ದಾರೆ.

ಡೆಪ್ಯೂಟಿ ಸಿಎಂ ಅವರನ್ನ ಭೇಟಿಯಾಗಿದ್ದೀನಿ. ಸಿಎಂ ಅವರ ಭೇಟಿಗೂ ಸಮಯ ಕೇಳಿದ್ದೀನಿ. ರಾಜ್ಯಪಾಲರ ಸಮಯವನ್ನು ಕೇಳಿದ್ದೀನಿ. ನಮ್ಮ ಹಿರಿಯ ನಾಯಕರಾದ ಯಡಿಯೂರಪ್ಪ ಅವರನ್ನು ಭೇಟಿಯಾಗ್ತಾ ಇದ್ದೀನಿ. ದೇವೇಗೌಡರು ಊರಿಗೆ ಹೋಗ್ತಾರಂತೆ ಅಷ್ಟರ ಒಳಗೆ ಅವರನ್ನು ಭೇಟಿಯಾಗುವ ಪ್ರಯತ್ನ ಮಾಡ್ತೇನೆ. ನನ್ನ ಮಗಳ ನಿಶ್ಚಿತಾರ್ಥವಿದೆ 19ನೇ ತಾರೀಖು ಹೀಗಾಗಿ ಆಹ್ವಾನ ಮಾಡುವುದಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಇಂಡಿಯಾ ಪಾಕಿಸ್ತಾನದ ಮ್ಯಾಚ್ ಇರುವ ಬಗ್ಗೆಯೂ ಮಾತನ್ನಾಡಿದ್ದು, ಇಂಡಿಯಾ – ಪಾಕಿಸ್ತಾನದ ಮ್ಯಾಚ್ ಯಾವಾಗಲೂ ಒಂದು ಪ್ರತಿಷ್ಠೆಯ ಕಣವಾಗುತ್ತದೆ. ಸತತವಾಗಿ ಏಳು ಬಾರಿ ಗೆದ್ದಿದ್ದೇವೆ. ಎಂಟನೇ ಬಾರಿಯೂ ಗೆಲುವು ನಮ್ಮದೆ ಆಗಿರುತ್ತದೆ. ಪಾಕಿಸ್ತಾನವನ್ನ ಏಷ್ಯಾಕಪ್ ನಲ್ಲಿ ಯಾವ ರೀತಿಯಲ್ಲಿ ಸೋಲಿಸಿದ್ದೇವೆ, ಈ ವರ್ಲ್ಡ್ ಕಪ್ ನಲ್ಲಿಯೂ ಪಾಕಿಸ್ತಾನವನ್ನು ಸೋಲಿಸುವ ಸಂಪೂರ್ಣ ಸಾಮರ್ಥ್ಯ ನಮ್ಮ ತಂಡಕ್ಕೆ ಇದೆ. ನಮ್ಮ ಇಂಡಿಯಾ ಟೀಂಗೆ ಶುಭವನ್ನು ಕೋರುತ್ತೇನೆ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ನಮ್ಮ ಇಂಡಿಯಾದ ಗೆಲುವಿಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now