ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 07 : ಹದಿನೆಂಟು ವರ್ಷಗಳ ನಂತರ ಆರ್.ಸಿ.ಬಿ. ಕಪ್ ಗೆದ್ದಿರುವುದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ಬಲಿಯಾಗಿರುವುದಕ್ಕೆ ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿರುವುದನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನಿರೀಕ್ಷೆಗೂ ಮೀರಿ ಅಭಿಮಾನಿಗಳು ಏಕಾ ಏಕಿ ಸ್ಟೇಡಿಯಂ ಒಳಗೆ ನುಗ್ಗಿದ ಪರಿಣಾಮ ಉಂಟಾದ ಕಾಲ್ತುಳಿತಕ್ಕೂ ಬಿ.ದಯಾನಂದ್‍ರವರ ಅಮಾನತ್ತಿಗೂ ಒಂದಕ್ಕೊಂದು ಸಂಬಂಧವಿಲ್ಲ. ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸದ ಕಾರಣ ಸಾವು ನೋವು ಉಂಟಾಗಿದೆಯೇ ವಿನಃ ಪೊಲೀಸರ ವೈಫಲ್ಯದಿಂದ ಅಲ್ಲ ಎನ್ನುವ ಸಾಮಾನ್ಯ
ಜ್ಞಾನವೂ ಇಲ್ಲದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಮಾನತ್ತು ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಲಕ್ಷ್ಮಿಸಾಗರ, ಸೋಮೇಂದ್ರ ಬಿ.ಟಿ. ಸತ್ಯಪ್ಪ ಮಲ್ಲಾಪುರ, ಚಂದ್ರಪ್ಪ ಘಾಟ್, ವಕೀಲರುಗಳಾದ ಅಶೋಕ್‍ಬೆಳಗಟ್ಟ, ದಾಸಪ್ಪ, ಮಂಜುನಾಥ, ರಾಮಚಂದ್ರಪ್ಪ, ಬಚ್ಚಬೋರನಹಟ್ಟಿ ಈರಬೋರಯ್ಯ ಇವರುಗಳು ಈ ಸಂದರ್ಭದಲ್ಲಿದ್ದರು.
















