Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಏನ್ ಗುರು ಇದು.. ಅಜ್ಜ-ಅಜ್ಜಿನೂ ಹೇಳ್ತಿದ್ದಾರೆ ಬಾಗ್ಲು ತೆಗಿ ಮೇರಿ ಜಾನ್..!

Facebook
Twitter
Telegram
WhatsApp

ಸಂಗೀತ ಇಷ್ಟ ಪಡದವರು ಈ ಜಗತ್ತಲ್ಲಿ ಯಾರಾದ್ರೂ ಇದ್ದಾರಾ..? ನೋ ವೇ ಚಾನ್ಸೇ ಇಲ್ಲ.. ಹಾಗಂತ ಎಲ್ಲರಿಗೂ ಒಂದೇ ರೀತಿಯ ಹಾಡುಗಳು ರುಚಿಸುತ್ತೆ ಅಂತ ಹೇಳೋಕೆ ಸಾಧ್ಯವೂ ಇಲ್ಲ. ಆದ್ರೆ ಕೆಲವೊಂದು ಹಾಡುಗಳು ಅದೆಷ್ಟರ ಮಟ್ಟಿಗೆ ಎಲ್ಲರೊಳಗು ಒಂದೇ ಎಂಬಂತೆ ಗುನುಗುತ್ತೆ ಅಂದ್ರೆ ಅಂದಾಜಿಗೂ ಸಿಲುಕಲ್ಲ. ಅಂತದ್ದೊಂದು ಮೋಡಿ ಮಾಡಿದೆ ‘ಬಾಗ್ಲೂ ತೆಗಿ ಮೇರಿ ಜಾನ್’ ಹಾಡು.

ತೋತಾಪುರಿ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡ್ತಾ ಇದೆ. ಒಮ್ಮೆ ಹಿಟ್ ಕೊಟ್ಟ ಕಾಂಬೀನೇಷನ್ ಮತ್ತೆ ಒಂದಾದ್ರೆ ಅಲ್ಲಿ ಎಕ್ಸ್ ಪೆಕ್ಟೇಷನ್ಸ್ ಜಾಸ್ತಿಯೇ ಇರುತ್ತೆ. ಅದನ್ನ ವಿಜಯಪ್ರಸಾದ್ ಅಂಡ್ ಜಗ್ಗೇಶ್ ಖಂಡಿತ ಕ್ಯಾರಿ ಮಾಡಿಯೇ ಇದ್ದಾರೆ. ಅದು ಈಗಾಗ್ಲೇ ಸಿನಿಮಾದ ಒಂದಷ್ಟು ಅಪ್ಡೇಟ್ ನೋಡಿದಾಗ್ಲೇ ತಿಳಿದಿದೆ. ಈಗ ವಿಚಾರ ಆ ಸಿನಿಮಾದಿಂದ ರಿಲೀಸ್ ಆದ ಹಾಡಿನದ್ದು.

ಈಗಂತು ಸೋಶಿಯಲ್ ಮೀಡಿಯಾದ್ದೆ ಸದ್ದು. ಅದರಲ್ಲೂ ರೀಲ್ಸ್ ನಲ್ಲಿ ಹಾಡು ಇಷ್ಟ ಆಗೋಯ್ತು ಅಂದ್ರೆ ಸಾಂಗ್ಸ್ ರಿದಮ್ ಗೆ ತಕ್ಕಂತೆ ಸ್ಟೆಪ್ಸ್ ಸಿಕ್ಕಿ ಬಿಡ್ತು ಅಂದ್ರೆ ಸಾಕು. ನೋಡ್ ನೋಡ್ತಿದ್ದಂತೆ ರೀಲ್ಸ್ ನಲ್ಲಿ ಸಾಂಗ್ಸ್ ಟ್ರೆಂಡಿಂಗ್ ನಲ್ಲಿ ಕೂತ್ಕೋಬಿಡುತ್ತೆ. ಡಾನ್ಸ್ ಪ್ರಿಯರಿಗೆ, ರೀಲ್ಸ್ ಪ್ರಿಯರಿಗೆ ಅಂತ ರಿದಮ್ ಕೊಟ್ಟಿದೆ ತೋತಾಪುರಿ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು.


ಸದ್ಯ ರಿಲೀಸ್ ಆದ ಕೆಲವೇ ದಿನಗಳಲ್ಲಿ 6 ಲಕ್ಷ ವೀಕ್ಷಣೆ ಪಡೆದಿರೋ ಈ ಹಾಡಿಗೆ ವಿಜಯಪ್ರಸಾದ್ ಸಾಹಿತ್ಯ ಬರೆದಿದ್ದಾರೆ.  ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಗ್ಗೇಶ್ ಜೊತೆ ಜೊತೆಗೆ ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್ ಸೇರಿದಂತೆ  ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

error: Content is protected !!