Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಣ್ಣ, ದರ್ಶನ್, ಧ್ರುವ ಬಗ್ಗೆ ಕೆಟ್ಟ ಮಾತು : ಹಿರಿತೆರೆ, ಕಿರುತೆರೆಯಿಂದಾನೂ ಮಡೆನೂರು ಮನು ಬ್ಯಾನ್..!

---Advertisement---

ಬೆಂಗಳೂರು; ಮಡೆನೂರು ಮನು ಲೈಂಗಿಕ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈಗ ಆತನ ಮೇಲಿರುವುದು ಅದೊಂದೆ‌ ಕೇಸಲ್ಲ ಬ್ಯಾಕ್ ಟು ಬ್ಯಾಕ್ ಕೇಸ್ ಗಳು ದಾಖಲಾಗುತ್ತಿವೆ. ಅದಕ್ಕೆ ಕಾರಣ ಆತನ ಆಡಿದಂತ ಮಾತುಗಳು. ಅದರಲ್ಲೂ ಕುಡಿದ ಮತ್ತಿ‌‌ನಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳವು. ಆ ಮಾತುಗಳಿಗೆ ಇಡೀ ಕರ್ನಾಟಕದ ಮಂದಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಮಡೆನೂರು ಅಹಂಕಾರದ ಪರಮಾವಧಿ ಎಲ್ಲಿಯ ತನಕ ಬಂದಿದೆ ಅಂದ್ರೆ ಆತನ ಕನಸುಗಳನ್ನ ತನ್ನ ಕೈಯ್ಯಾರೇ ತಾನೇ ಚಿವುಟಿಕೊಂಡಿದ್ದಾರೆ. ಅಂದ್ರೆ ಈಗ ಕಿರುತೆರೆ ಹಾಗೂ ಹಿರಿತೆರೆಯಿಂದಾನೂ ಬ್ಯಾನ್ ಮಾಡಲಾಗಿದೆ.

ಕನ್ನಡದ ಚಿತ್ರರಂಗದ ಮುತ್ತು ಶ್ರೀಮುತ್ತು. ಅಂದ್ರೆ ನಮ್ಮ ಶಿವಣ್ಣ. ಈಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಅವರ ಸಾವನ್ನೇ ಬಯಸಿದರೆ ಯಾರಿಗೆ ತಾನೇ ಸಹಿಸೋದಕ್ಕೆ ಸಾಧ್ಯವಿದೆ ಹೇಳಿ. ಅದರಲ್ಲೂ ರಾಜ್ಯಾದ್ಯಂತ ಅಣ್ಣಾವ್ರ ಅಭಿಮಾನಿ ಬಳಗ ಕಡಿಮೆ ಏನು ಇಲ್ಲ. ಹೀಗಾಗಿ ಆತನ ಮೇಲೆ ದೂರುಗಳ ಮೇಲೆ ದೂರು ಬಂದ ಕಾರಣ, ಆತನನ್ನ ಬ್ಯಾನ್ ಮಾಡಲು ಫಿಲ್ಮ್ ಚೇಂಬರ್ ಕೂಡ ನಿರ್ಧಾರ ಮಾಡಿದೆ.

ಶಿವಣ್ಣ, ದರ್ಶನ್, ಧ್ರುವ ಅವರ ಬಗ್ಗೆ ಈ ರೀತಿ ಮಾತನಾಡಿದ್ದು ತಪ್ಪು. ನಾವೂ ಕೂಡ ಪೊಲೀಸ್ ಕಮಿಷನರ್ ಗೆ ದೂರು ನೀಡುತ್ತೇವೆ. ಇನ್ಮುಂದೆ ಯಾವುದೇ ಶೋ, ಸಿನಿಮಾಗಳಲ್ಲಿ ಆತ ಕಾಣಿಸಬಾರದು ಎಂದೇ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಆಗ್ರಹ ಮಾಡಿದ್ದಾರೆ. ಈಗಾಗಲೇ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನವನ್ನು ಅತ್ಯಾ*ರ ಕೇಸಲ್ಲಿ ನೀಡಿದೆ. ಅದನ್ನ ಮುಗಿಸಿಕೊಂಡು ಬರುವಷ್ಟರಲ್ಲಿ ರಾಜ್‍ಕುಮಾರ್ ಅಭಿಮಾನಿಗಳ ಸಂಘದವರು ಹಾಕಿರೋ ಕೇಸ್ ಗಳನ್ನ ಎದುರಿಸಬೇಕಾದ ಅನಿವಾರ್ಯತೆ ಮಡೆನೂರು ಮನುಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment