Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು ಅಂದ್ರೆ ಧ್ವನಿ ಜೋರಾಗಿರಬೇಕು ಎಂದೇ ಥಿಂಕ್ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಬಂದಾಗಿನಿಂದ ಸವಾಲುಗಳನ್ನು ಹಾಕುತ್ತಲೇ ಇದ್ದಾರೆ. ಅದರಲ್ಲೂ ಮಂಜುಗೆ ನೇರಾ ನೇರ ಸವಾಲು ಹಾಕಿದ್ದಾರೆ.

ರಜತ್ ಬಂದಾಗಿನಿಂದ ಶಾಂತಿಯುತ ವಾತಾವರಣವೇ ಇಲ್ಲ. ನಮ್ಮ ಮನೆಯಲ್ಲಿ ಪಾತ್ರೆನೆ ತೊಳೆದಿಲ್ಲ ಗುರು. ಅದು ಮಾಡಿಲ್ಲ, ಇದು ಮಾಡಿಲ್ಲ ಅಂತಾನೇ ರಜತ್ ಎಲ್ಲರ ಮುಂದೆ ಓಡಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಅವರ ಬಾಯಿಂದ ಬರೋದೆ ಅಸಭ್ಯವಾದ ಮಾತು. ಬಿಲ್ಡಪ್ ಕೊಟ್ಕೊಂಡು ಓಡಾಡೋದಲ್ಲದೆ ಕಿವಿ ಮುಚ್ಚಿಕೊಳ್ಳುವಂತ ಮಾತನ್ನೇ ಆಡುತ್ತಾ ಇರುತ್ತಾರೆ.

 

ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಪಂಚಾಯ್ತಿಯಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ರಜತ್ ಎಂಟ್ರಿ ಕೊಟ್ಟಿದ್ದರು. ಆಡಿದ ಮಾತುಗಳು ಒಂದೊಂದು ಮುತ್ತುಗಳಾಗಿತ್ತು. ಆ ಮಾತುಗಳು ಕಿಚ್ಚನ ಕೋಪಕ್ಕೂ ಗುರಿಯಾಗಿದೆ. ಇಂದು ಪಂಚಾಯ್ತಿಯಲ್ಲಿ ರಜತ್ ಗೆ ಎಚ್ಚರಿಕೆ ನೀಡಿದ್ದಾರೆ.

ಅಂದು ಆಡಿದ ಮಾತುಗಳನ್ನೆಲ್ಲ ಎಲ್ಲಿ ನನ್ನ ಮುಂದೆ ಆಡಿ ಈಗ ಎಂದಾಗ ರಜತ್ ತಪ್ಪಾಯ್ತು ಸರ್. ಇನ್ಮುಂದೆ ಆ ರೀತಿಯ ಮಾತುಗಳನ್ನ ಆಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು, ನೋನೋ ಆಡೋದಕ್ಕೆ ಅವಕಾಶವೇ ಇಲ್ಲ.. ನೇರವಾಗಿ ಬಾಗಿಲು ತೆರೆಯುತ್ತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಕಿಚ್ಚ ಸುದೀಪ್ ಒಳ್ಳೆಯವರಿಗೆ, ಒಳ್ಳೆಯತನಕ್ಕೆ ಭೇಷ್ ಎಂದು ಬೆನ್ನು ತಟ್ಟುತ್ತಾರೆ, ಕೇಳಿದ್ದನ್ನು ಕೊಡುತ್ತಾರೆ. ಈಗ ಹನುಮಂತು ಒಳ್ಳೆಯತನಕ್ಕೆ ಕಿಚ್ಚ ಸುದೀಪ್ ಅವರೇ ಮನಸೋತಿಲ್ವಾ ಹಾಗೆ. ಏನಾದರೂ ಜಾಸ್ತಿ ಹಾರಾಡಿದರೆ ರೆಕ್ಕೆಯನ್ನ ಮಾತಲ್ಲೇ ಕಟ್ಟು ಮಾಡಿ ಬಿಡುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment